ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ರೈತರಿಗೆ ಸುವರ್ಣಾವಕಾಶ

By Staff
|
Google Oneindia Kannada News

Yeddyurappa
ಬೆಂಗಳೂರು, ಸೆ.27: ಮುಖ್ಯಮಂತ್ರಿಗಳು 2009 10ನೇ ಸಾಲಿನ ಆಯವ್ಯಯ ಮಂಡಿಸುವ ಸಂದರ್ಭದಲ್ಲಿ ರಾಜ್ಯದ ರೈತರ ಸಾಲದ ಮೇಲಿನ ಬಡ್ಡಿಯ ಹೊರೆಯನ್ನು ಕಡಿಮೆ ಮಾಡುವುದಾಗಿ ತಿಳಿಸಿದ್ದರು. ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳು ಹಾಗು ಪ್ರಾದೇಶಿಕ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಮೂಲಕವೂ ಸಹ ರೈತರಿಗೆ ನೀಡುವ ಬೆಳೆ ಸಾಲದ ಬಡ್ಡಿಯ ಶೇಕಡಾ4 ರಷ್ಟನ್ನು ರಾಜ್ಯ ಸರ್ಕಾರ ಭರಿಸುವುದಾಗಿ ಘೋಷಿಸಿದ್ದರು. ಇದಕ್ಕಾಗಿ ಆಯವ್ಯಯದಲ್ಲಿ ಅನುದಾನವನ್ನು ಸಹ ಒದಗಿಸಲಾಗಿದೆ.

ನಿಗದಿತ ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿಯನ್ನು ಪಾವತಿ ಮಾಡಿದ ರೈತರಿಗೆ ಶೇ.1 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸುವುದಾಗಿ ಘೋಷಣೆ ಮಾಡಿರುವುದರಿಂದ ಇದು ಅನುಷ್ಟಾನಕ್ಕೆ ಬರುವವರೆಗೆ ರಾಜ್ಯ ಸರ್ಕಾರ ಶೇ.4 ರಷ್ಟನ್ನು ಹಾಗೂ ಅನುಷ್ಟಾನಕ್ಕೆ ಬಂದ ನಂತರ ಶೇ.3 ರಷ್ಟು ಬಡ್ಡಿಯನ್ನು ರೈತರ ಪರವಾಗಿ ರಾಜ್ಯ ಸರ್ಕಾರ ಭರಿಸಿ ಸಂಬಂಧಿಸಿದ ಬ್ಯಾಂಕುಗಳಿಗೆ ಎಸ್‌ಎಲ್‌ಬಿಸಿ ಮೂಲಕ ಕೃಷಿ ಇಲಾಖೆಯು ಪಾವತಿಸುವುದು. ಉಳಿದ ಶೇ.3 ರಷ್ಟು ಬಡ್ಡಿಯನ್ನು ಮಾತ್ರ ರೈತರು ಪಾವತಿಸಬೇಕಾಗುತ್ತದೆ ಎಂದು ಕೃಷಿ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸೌಲಭ್ಯ ಪಡೆಯಲು ಅರ್ಹ ರೈತರು ಹಾಗು ನಿಯಮಗಳು:

ರೈತ ಕುಟುಂಬಕ್ಕೆ ಮಾತ್ರ (Individual) ಈ ಸೌಲಭ್ಯ.
ರು.50,000 ಮಿತಿಯೊಳಗೆ ಬೆಳೆಸಾಲ/ಅಲ್ಪಾವಧಿ ಕೃಷಿ ಸಾಲ ಪಡೆದ ರೈತರಿಗೆ ಮಾತ್ರ.
ದಿನಾಂಕ 1-4-2009 ರಿಂದೀಚೆಗೆ ಪಡೆದ ಸಾಲಕ್ಕೆ ಮಾತ್ರ ಅನ್ವಯ.
ಅಸಲು ಮತ್ತು ಬಡ್ಡಿಯನ್ನು ಬ್ಯಾಂಕು ನಿಗದಿಗೊಳಿಸಿದ ಅವಧಿಯೊಳಗೆ ಪಾವತಿಸಿದ ರೈತರಿಗೆ ಮಾತ್ರ ಸೌಲಭ್ಯ.
ನಿಗದಿತ ಸಮಯದಲ್ಲಿ ಅಸಲು ಮತ್ತು ಬಡ್ಡಿಯನ್ನು ಪಾವತಿಸದ ರೈತರು ಬ್ಯಾಂಕ್ ನಿಗದಿಪಡಿಸಿದ ಪೂರ್ಣ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗೆ ಹತ್ತಿರದ ಕೃಷಿ ಇಲಾಖೆ ಅಥವಾ ಬ್ಯಾಂಕ್ ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಲು ಕೋರಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X