ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ

By Staff
|
Google Oneindia Kannada News

TotalOutSource celebrated Engineers Day
ಬೆಂಗಳೂರು, ಸೆ. 24 : ಕನ್ನಡನಾಡಿನ ಮೇಧಾವಿ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿನಲ್ಲಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೋಟಲ್ ಔಟ್ ಸೋರ್ಸ್ ಇಂಜಿನಿಯರ್ಸ್ ದಿನವನ್ನು ಸೆಪ್ಟೆಂಬರ್ 18ರಂದು ವಿಭಿನ್ನವಾಗಿ ಆಚರಿಸಿತು. ಇಂಜಿನಿಯರ್ಸ್ ಡೇಯನ್ನು ಟೋಟಲ್ ಔಟ್ ಸೋರ್ಸ್ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.

ಸರ್ ಎಂವಿಯನ್ನು ನೆನೆಯುವುದರ ಜೊತೆಗೆ ಉದ್ಯೋಗಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ, ಕಟ್ಟಡಗಳ ಮಾಡೆಲ್ ರಚನೆ, ಭೂತಾಪಮಾನ ಏರಿಕೆ ಕುರಿತ ಕೋಲಾಜ್, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಕ, ಯುವತಿಯರ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಸ್ಪರ್ಧೆಗಳಲ್ಲಿ ಉದ್ಯೋಗಿಗಳು ಅತ್ಯಂತ ಸಂತಸದಿಂದ ಪಾಲ್ಗೊಂಡರು. ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಮತ್ತು ಡೀನ್ ಆಗಿರುವ ಪ್ರೊ.ಬಿ.ಆರ್.ನಿರಂಜನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಗ್ಲೇಡ್ ಇಂಡಿಯಾ ಪ್ರೈ.ಲಿ.ನ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿರುವ ಬಾಲಾಜಿ, ತಂತ್ರ ಇನ್ಫೋ ಸೋಲ್ಯುಷನ್ಸ್ ನ ಉಪಾಧ್ಯಕ್ಷ ಮುರಳಿಕೃಷ್ಣ ಅವರು ಸಮಾರಂಭಕ್ಕೆ ಶೋಭೆ ತಂದರು. ಮುಖ್ಯ ಅತಿಥಿಗಳು ಮತ್ತಿತರ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚಂದ್ರಶೇಖರ್ ಬಿಎಸ್ ಅವರು ಅತಿಥಿ ಮತ್ತು ಉದ್ಯೋಗಿಗಳನ್ನು ಸ್ವಾಗತಿಸಿದರು. ವಿಜೇಂದ್ರ ಎಸ್ ವಿ ಅವರು ಮುಖ್ಯ ಅತಿಥಿಯ ಪರಿಚಯ ಮಾಡಿಕೊಟ್ಟರು. ಬಿಆರ್ ನಿರಂಜನ್ ಅವರು ವಿಶ್ವೇಶ್ವರಯ್ಯ ಅವರ ಸಾಧನೆ ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ವಿವರಿಸಿದರು.

ಫುಡ್ ಪ್ರೊಸೆಸಿಂಗ್ ಪ್ಲಾಂಟ್ ಮಾಡೆಲ್ ತಯಾರಿಸಿದ ಶರತ್ ಮತ್ತು ತಂಡ ಪ್ರಥಮ ಬಹುಮಾನ ಗಳಿಸಿತು. ಮೇಘನಾ ಅವರು ಜಿಯೋಟೈಪ್ ಮಾಡೆಲ್ ರಚಿಸಿದ್ದಕ್ಕಾಗಿ ಎರಡನೇ ಬಹುಮಾನ ತಮ್ಮದಾಗಿಸಿಕೊಂಡರು. ಕೋಲಾಜ್ ವಿಭಾಗದಲ್ಲಿ ಹೇಮಲತಾ ಮೊದಲ ಬಹುಮಾನ ಗಿಟ್ಟಿಸಿದರೆ, ವಿಜಯಪ್ರಿಯಾ ಮತ್ತು ಸೋಮೇಶ್ ಕ್ರಮವಾಗಿ ಎರಡನೇ ಮತ್ತು ಮೂರನೇ ಬಹುಮಾನ ಗಳಿಸಿದರು. ಚರ್ಚಾ ಸ್ಪರ್ಧೆಯಲ್ಲಿ ಶ್ರೀನಿವಾಸ್ ಎಂಎಸ್, ಚರಣ್ ಮತ್ತು ಕ್ಷಿತಿಶ್ ಅವರ ತಂಡ ಮೊದಲ ಬಹುಮಾನ ಗಿಟ್ಟಿಸಿತು.

ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀನಿವಾಸ್ ಎಂಎಸ್ ನಡೆಸಿಕೊಟ್ಟರು. ಮುರಳಿಧರ ಜೆಕೆ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಣ್ಮುಗವಳ್ಳಿ ವಂದನಾರ್ಪಣೆ ಮಾಡಿದರು.

ಇಂಜಿನಿಯರ್ಸ್ ಡೇ ಆಚರಣೆಯ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X