ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಮೇಲೆ ನೀರುಂಟು : ನಾಸಾ

By Staff
|
Google Oneindia Kannada News

ISRO to confirm existence of water on moon
ಬೆಂಗಳೂರು, ಸೆ. 23 : ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ನೀರು ಇರುವುದನ್ನು ಭಾರತದ ಚಂದ್ರಯಾನ-1 ನೌಕೆ ಪತ್ತೆ ಹಚ್ಚಿದೆ. ಅಮೆರಿಕ ಮತ್ತು ಭಾರತ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ ಎಂದು ಅಮೆರಿಕ ಮೂಲಕ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿದೆ.

2008ರ ಅಕ್ಟೋಬರ್ ನಲ್ಲಿ ಸುಮಾರು 386 ಕೋಟಿ ರುಪಾಯಿ ವೆಚ್ಚದಲ್ಲಿ ಚಂದ್ರಯಾನ1 ನೌಕೆಯನ್ನು ಯಶಸ್ವಿಯಾಗಿ ಉಡಾವಣಾ ಮಾಡಲಾಗಿತ್ತು. ಅಮೆರಿಕದ ನಾಸಾ ಸಂಶೋಧನಾ ಕೇಂದ್ರದಲ್ಲಿರುವ ಮೂನ್ ಮೈನರಾಲಜಿ ಮ್ಯಾಪರ್ (M3)ಮೂಲಕ ಚಂದ್ರನ ಮೇಲ್ಮೈಯಲ್ಲಿ ನೀರು ಇರುವ ಸಂಗತಿ ಗೊತ್ತಾಗಿದೆ ಎಂದು ಅಮೆರಿಕದ ವಿಜ್ಞಾನಿ ಕಾರ್ಲೆ ಪೀಟರ್ಸ್ ಸ್ಪಷ್ಟಪಡಿಸಿದ್ದಾರೆ.

ಇಸ್ರೋ ಅಧ್ಯಕ್ಷ ಮಾಧವನ್ ನಾಯರ್, ಚಂದ್ರನ ಮೇಲ್ಮೈಯಲ್ಲಿ ನೀರು ಇರುವ ಸಂಗತಿಯನ್ನು ಸ್ಪಷ್ಟಪಡಿಸಿಲ್ಲ. ಆದರೆ, ಇಸ್ರೋದ ಯೋಜನಾ ನಿರ್ದೇಶಕ ಮೈಲಸ್ವಾಮಿ ಅಣ್ಣಾದೊರೈ ಸಂತೃಪ್ತಿ ವ್ಯಕ್ತಪಡಿಸಿದ್ದು, ನಮ್ಮ ಬೆವರಿಗೆ ಬೆಲೆ ಸಿಕ್ಕಂತಾಗಿದೆ ಎಂದಿದ್ದಾರೆ. ಶುಕ್ರವಾರ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹಾಗೂ ಅಮೆರಿಕದ ನಾಸಾ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ.

ಚಂದ್ರಯಾನದಲ್ಲಿ ದೊರೆತ ಮಾಹಿತಿಗಳ ಸಂಸ್ಕರಣೆಯನ್ನು ಅಮೆರಿಕದ ಜೆಟ್ ಪೊಪಲ್ಷನ್ ಪ್ರಯೋಗಾಲಯ, ಅಹಮದಾಬಾದ್‌ನಲ್ಲಿರುವ ಭೌತ ಸಂಶೋಧನಾ ಪ್ರಯೋಗಾಲಯ ಮತ್ತು ಬಾಹ್ಯಾಕಾಶ ಅನ್ವಯಿಕ ಕೇಂದ್ರಗಳ ವಿಜ್ಞಾನಿಗಳು ನಡೆಸಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X