ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ಮಧ್ಯರಾತ್ರಿ ಬೆಂಗ್ಳೂರು ಜಲಾವೃತ

By Staff
|
Google Oneindia Kannada News

heavy rains deluges Bengaluru
ಬೆಂಗಳೂರು, ಸೆ. 24 : ನಗರದಲ್ಲಿ ಬುಧವಾರ ರಾತ್ರಿ ಕುಂಭದ್ರೊಣ ಮಳೆ ಸುರಿದಿದ್ದು, ನಂದಿನಿಲೇಔಟ್, ಮಹಾಲಕ್ಷ್ಮಿ ಲೇಔಟ್, ಚಾಮರಾಜಪೇಟೆ, ಜಯನಗರ, ಲಗ್ಗೆರೆ, ಪೀಣ್ಯ, ಶಿವಾಜಿನಗರ, ಹೊಸಗುಡ್ಡದಹಳ್ಳಿ, ಈಜೀಪುರ, ಆನೆಪಾಳ್ಯ, ನೀಲಸಂದ್ರ, ಮಾಗಡಿ ರಸ್ತೆ, ಆನಂದಪುರ, ದೇವಸಂದ್ರ, ನಾಯಂಡಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳ ಕೆಲವಡೆ ಮಳೆ ನೀರು ನದಿಯಂತಾಗಿದ್ದು, ಕಾರು, ಬೈಕ್ ಗಳು ನೀರಿನಲ್ಲಿ ತೇಲಾಡುವಂತಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂದಿನ 36 ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಡರಾತ್ರಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ತಾವಿದ್ದಲ್ಲೇ ವಾಹನಗಳನ್ನು ನಿಲ್ಲಿಸಿ ತೀವ್ರ ಸಮಸ್ಯೆ ಎದುರಿಸಬೇಕಾಯಿತು. ಆನಂದರಾವ್ ವೃತ್ತ ಸಮೀಪ ಶಿವಮೂಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಮುಳುಗಡೆಯಾಯಿತು. ಅದರಲ್ಲಿ ಸುಮಾರು 70 ಜನ ಪ್ರಯಾಣಿಸುತ್ತಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್ ನ ಗಾಜು ಒಡೆದು, ಬೋಟ್ ಮೂಲಕ ಪ್ರಯಾಣಿಕರನ್ನು ರಕ್ಷಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಕಳುಹಿಸಿಕೊಟ್ಟರು.

ಎಂಎಸ್ ರಾಮಯ್ಯ ಕಾಲೇಜು ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಪುನಃ ರಸ್ತೆಗೆ ಉರುಳಿವೆ. ಮೇಖ್ರಿವೃತ್ತ, ಸದಾಶಿವನಗರದಲ್ಲಿ ಮರಗಳು ನೆಲಕಚ್ಚಿವೆ. ಗಂಗೊಂಡನಹಳ್ಳಿಯಲ್ಲಿ 40 ಮನೆಗಳಿಗೆ ನೀರು ನುಗ್ಗಿದೆ. ಜೆಸಿ ರಸ್ತೆ, ವಿಧಾನಸೌಧದ ರಸ್ತೆ, ಕೆ ಆರ್ ಮಾರುಕಟ್ಟೆ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡಿತ್ತು. ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಚಿನ್ನಸ್ವಾಮಿ ಕ್ರಿಡಾಂಗಣಕ್ಕೆ ಹೋಗಿದ್ದ ಪ್ರೇಕ್ಷಕರು ಮಳೆಯಿಂದಾಗಿ ಕ್ರೀಡಾಂಗಣದಲ್ಲೇ ಕಾಲ ಕಳೆಯುವಂತಾಯಿತು.

ಗಂಗಾನಗರ ಎಚ್ಎಂಟಿ ಬಡಾವಣೆ ತರಕಾರಿ ಮಾರುಕಟ್ಟೆಯ ಬಳಿ ಏರ್ ಪೋರ್ಸ್ ತರಬೇತಿ ಕೇಂದ್ರದ ತಡೆಗೋಡೆ ಬಿದ್ದು ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರು ಗಂಟೆಗಟ್ಟಲೇ ಮಳೆಯಲ್ಲೇ ಕಳೆಯುವಂತಾಯಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X