ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಕಾಮಗಾರಿ ಪೂರ್ಣ

By Staff
|
Google Oneindia Kannada News

Electronic city Elecvated Fly over
ಬೆಂಗಳೂರು, ಸೆ. 24 : ಕುಂಟುತ್ತಾ, ತೆವಳುತ್ತಾ ಸಾಗಿದ್ದ ದೇಶದ ಮೂರನೇ ಮತ್ತು ರಾಜ್ಯದ ಮೊದಲ ಅತೀಉದ್ದದ ಮೇಲು ಸೇತುವೆ (FLY OVER) ಎಂದು ಬಿರುದಾಂಕಿತವಾದ ಹೊಸೂರು ರಸ್ತೆಯ ಬೊಮ್ಮನಹಳ್ಳಿ - ಇಲೆಕ್ಟ್ರಾನಿಕ್ ಸಿಟಿ ಮೇಲು ಸೇತುವೆ ಸದ್ಯದಲ್ಲೇ ಸಾರ್ವಜನಿಕ ಬಳಕೆಗೆ ತೆರೆದುಕೊಳ್ಳಲಿದೆ. ಬಿಬಿಎಂಪಿ ಮೂಲಗಳ ಪ್ರಕಾರ ನವೆಂಬರ್ ತಿಂಗಳಲ್ಲಿ ಈ ಮೇಲು ಸೇತುವೆ ಉದ್ಘಾಟನೆಯಾಗಬಹುದು. (ಕನ್ನಡ ರಾಜ್ಯೋತ್ಸವಕ್ಕೂ ಮೇಲು ಸೇತುವೆ ಉದ್ಘಾಟನೆಗೂ ಸಂಬಂಧವಿಲ್ಲ, ಗಮನಿಸುವುದು)

ಭಯಂಕರ ವಾಹನ ಸಂಚಾರ ದಟ್ಟಣೆಯಿಂದಾಗಿ ಸದ್ಯ, ಹೆಚ್ಚುಕಮ್ಮಿ 45 ನಿಮಿಷ ತೆಗೆದುಕೊಳ್ಳುತ್ತಿದ್ದ ಈ ದಾರಿಯನ್ನು ಇನ್ನು 12 ನಿಮಿಷದಲ್ಲೇ (ಗಂಟೆಗೆ 40 ಕಿಮೀ ವೇಗದಲ್ಲಿ) ತಲುಪಬಹುದು ಎನ್ನುವುದು ಲೆಕ್ಕಾಚಾರ. ಈ ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚ 775.7 ಕೋಟಿ ರೂಪಾಯಿ. ಜೈಲಿನಲ್ಲಿರುವ ಸತ್ಯಂ ರಾಜು ಅವರ ಮೇತಾಸ್, ನಾಗಾರ್ಜುನ ಕನ್ಸ್ ಸ್ಟ್ರಕ್ಷನ್ ಮತ್ತು ಸೋಮ ಎ೦ಟರ್ ಪ್ರೈಸಸ್ ಒಟ್ಟಾಗಿ ಈ ಸೇತುವೆ ನಿರ್ಮಿಸಿದೆ.

ಈ ಸೇತುವೆಯಲ್ಲಿರುವ ಕೆಲವೊಂದು ಸೌಲಭ್ಯಗಳು

1. ರಾಷ್ಟ್ರೀಯ ಹೆದ್ದಾರಿ ಸಂಚಾರ ಉಸ್ತುವಾರಿ ಪದ್ಧತಿ (Highway Traffic Management System)
2. ಐದು ಸಿಸಿ ಟಿವಿಗಳು
3. ಗಣಕೀಕೃತ ಶುಲ್ಕ ವಸೂಲಿ ಪದ್ಧತಿ (Electronic Toll collection)
4. ಭೌಗೋಳಿಕ ವಿವರಣೆ
5. ತುರ್ತು ಟೆಲಿಫೋನ್ ಬೂತ್

ಪ್ರಸ್ತಾಪವಾಗಿರುವ ಟೋಲ್ (ಅತ್ತಿಬೆಲೆ, ವಲಯ)

ದ್ವಿಚಕ್ರ ಮತ್ತು ಆಟೋಗಳಿಗೆ - ಮುಕ್ತ ಸಂಚಾರ
ಕಾರ್ - ಇಪ್ಪತ್ತು ರೂಪಾಯಿ
ಲಘು ಮೋಟಾರ್ ವಾಹನ - ಮೂವತ್ತು ರೂಪಾಯಿ
ಟ್ರಕ್ ಮತ್ತು ಬಸ್ - ಐವತ್ತು ರೂಪಾಯಿ

ಪ್ರಸ್ತಾಪವಾಗಿರುವ ಟೋಲ್ (ಇಲೆಕ್ಟ್ರಾನಿಕ್ ಸಿಟಿ, ವಲಯ)

ದ್ವಿಚಕ್ರ (15 ರೂಪಾಯಿ)ಮತ್ತು ಆಟೋಗಳಿಗೆ ಪ್ರವೇಶ ನಿರ್ಬಂಧ
ಕಾರ್ - ಮೂವತ್ತು ರೂಪಾಯಿ
ಲಘು ಮೋಟರ್ ವಾಹನ - ನಲವತ್ತು ರೂಪಾಯಿ
ಟ್ರಕ್ ಮತ್ತು ಬಸ್ - ಎಪ್ಪತ್ತು ರೂಪಾಯಿ

ದೇಶದ ಅತಿದೊಡ್ಡ ಮೇಲು ಸೇತುವೆಗಳು

1. ಚೆನ್ನೈ ಬಂದರಿನಿಂದ - ಮಧುರಾ ವೋಯಲ್ ನಡುವಿನ 19 ಕಿಮೀ.
2. ಹೈದರಾಬಾದ್ - ಶಂಶಾಬಾದ್ ನಡುವಿನ 11 .5 ಕಿಮೀ.
3. ಬೆಂಗಳೂರಿನ ಬೊಮ್ಮನಹಳ್ಳಿ - ಇಲೆಕ್ಟ್ರಾನಿಕ್ ಸಿಟಿ ನಡುವಿನ 9 ಕಿಮೀ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X