ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಕುಟುಂಬ ಕಥೆ ;ಹೆಗಡೆ ಸುಳ್ಳಿನ ಕಂತೆ

By * ಶಶಿಧರ್ ನಂದಿಕಲ್,
|
Google Oneindia Kannada News

File foto Netaji s daughter Anita
ಬೆಂಗಳೂರು, ಸೆ. 24: 'ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಪುತ್ರಿ ಆಸ್ಟ್ರಿಯಾದಲ್ಲಿ ಇದ್ದಾರೆ. ಅವರಿಗೆ ಸರಕಾರಿ ಗೌರವ ಸಿಕ್ಕಿಲ್ಲ. ಅವರನ್ನು ಇಲ್ಲಿಗೆ ಆಹ್ವಾನಿಸುವ ಪ್ರಯತ್ನ ನಡೆದಿದೆ' ಎಂಬ ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಶುದ್ಧ ಸುಳ್ಳಿನ ಕಂತೆ. ಸುಭಾಷ್‌ಚಂದ್ರ ಬೋಸ್ ಪುತ್ರಿ ಹಾಗೂ ಕುಟುಂಬದವರನ್ನು ಪತ್ತೆ ಮಾಡಲು ಸತತ3 ವರ್ಷದಿಂದ ಯತ್ನಿಸಿ ಯಶಸ್ಸು ಸಿಕ್ಕಿದೆ. ಅವರು ಆಸ್ಟ್ರಿಯಾದಲ್ಲಿ ನೆಲೆಸಿರುವುದು ಖಚಿತವಾಗಿದೆ. ನಮ್ಮಲ್ಲಿಗೆ ಬರಲು ಒಪ್ಪಿದ್ದಾರೆ' ಎಂದು ಶಿರಸಿಯಲ್ಲಿ ಕುಳಿತುಕೊಂಡು ಸಂಸದರು ರೀಲು ಬಿಟ್ಟಿದ್ದರು.

ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾಡಬೇಕಾದ ಕೆಲಸ ಬೆಟ್ಟದಷ್ಟು ಇರುವಾಗ, ಪತ್ತೇದಾರಿ ಕೆಲಸಕ್ಕೆ ಅನಂತಕುಮಾರ್ ಹೆಗಡೆ ಯಾಕೆ ಕೈಹಾಕಿದರೋ ಗೊತ್ತಾಗುತ್ತಿಲ್ಲ. ಅದೂ ಇಷ್ಟು ಬಾಲಿಶವಾಗಿ. ಸಂಸದರೊಬ್ಬರು ಇಂಥ ಕಾರ್ಯಕ್ಕೆ ಮುಂದಾ ಗುವುದು ತಪ್ಪಾಗಲಾರದು. ಪೂರ್ವಾಪರ ಯೋಚಿ ಸದೆ ಮುಂದಡಿ ಇಟ್ಟರೆ ನಗುವವರ ಮುಂದೆ ಜಾರಿ ಬಿದ್ದಂತಾಗುತ್ತದೆ. ಹೆಗಡೆ ಕತೆಯೂ ಈಗ ಹೀಗೇ ಆಗಿದೆ. ಹೆಗಡೆ ಈ ಸಾಹಸ'ಕ್ಕೆ ಅಣಿಯಾಗುವ ಮುನ್ನ ಬೆಂಗಳೂರಿನ ರಾಜರಾಜೇಶ್ವರಿನಗರಕ್ಕೆ ಒಮ್ಮೆ ಭೇಟಿ ನೀಡಿದ್ದರೂ ಶ್ರಮ ತಪ್ಪುತ್ತಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದರೂ ಸಾಕಿತ್ತು. ಇದಾವುದನ್ನೂ ಮಾಡದೆ, ತಾವೇ ತೋಡಿಕೊಂಡ ಗುಂಡಿಯೊಳಗೆ ಎಡವಿ ಬಿದ್ದಿದ್ದಾರೆ.

ಅಂದಹಾಗೆ ಬೋಸ್ ಪುತ್ರಿ ಅನಿತಾ ಫಾಫ್ ಕರ್ನಾಟಕಕ್ಕೇ ಬಂದಿದ್ದರು. ಅವರಿಗೆ ಸರಕಾರಿ ಗೌರವವೂ ಸಂದಿದೆ. 2000 ನೇ ಇಸವಿಯಲ್ಲಿ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್‌ನಲ್ಲಿ ಸುಭಾಷ ಭವನ' ನಿರ್ಮಾಣಕ್ಕೆ ಫಾಫ್ ಅಡಿಗಲ್ಲು ಹಾಕಿದ್ದಾರೆ. ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಚಿವರಾದ ಧರ್ಮಸಿಂಗ್, ಡಿ.ಬಿ. ಚಂದ್ರೇಗೌಡ, ರಾಣಿ ಸತೀಶ್ ಭಾಗವಹಿಸಿದ್ದರು. ನೇತಾಜಿ ಸುಭಾಷ್‌ಚಂದ್ರ ಬೋಸ್ ರಿಸರ್ಚ್ ಆಂಡ್ ಮಲ್ಟಿ ಡೆವಲಪ್‌ಮೆಂಟ್ ಟ್ರಸ್ಟ್' ಈ ಕಾರ್ಯಕ್ರಮ ಆಯೋಜಿಸಿತ್ತು. ಅಂದಿನ ಸಭಾಪತಿ ಡಿ.ಬಿ. ಕಲ್ಮಣಕರ್ ಇದರ ಸಂಸ್ಥಾಪಕ ಅಧ್ಯಕ್ಷರು. ಈ ವಿಚಾರ ಬಹಿರಂಗ ಪಡಿಸಿದವರು ಟ್ರಸ್ಟಿನ ಈಗಿನ ಸಂಘಟನಾ ಕಾರ್ಯದರ್ಶಿ ಎಂ. ರಾಜಕುಮಾರ್. ಇದಕ್ಕೆ ಅವರು ದಾಖಲೆಯನ್ನೂ ಒದಗಿಸಿದ್ದಾರೆ.

ಅದರ ಪ್ರಕಾರ, ಅನಿತಾ ಫಾಫ್ ಇರುವಿಕೆಯನ್ನು 1997ರಲ್ಲೇ ಶೋಧಿಸಲಾಗಿತ್ತು. ಅವರು ಜರ್ಮನಿಯಲ್ಲಿ ವಾಸವಾಗಿರುವುದು ಗೊತ್ತಾದ
ಮೇಲೆ ಡಿ.ಬಿ. ಕಲ್ಮಣಕರ್ ನೇತೃತ್ವದ ನಿಯೋಗ ಅಲ್ಲಿಗೆ ತೆರಳಿತ್ತು. ನಿಯೋಗದಲ್ಲಿ ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ
ಇದ್ದರು. ಬೋಸ್ ಪುತ್ರಿ ಹಿಂದೆಯೇ ಇಲ್ಲಿಗೆ ಬಂದಿದ್ದರು ಸಚಿತ್ರ ಸುಭಾಷ' ಬಿಡುಗಡೆ ಮಾಡುತ್ತಿರುವ ಬೋಸ್ ಪುತ್ರಿ ಅನಿತಾ ಫಾಫ್. ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಎಂ. ರಾಜಕುಮಾರ್ ಜತೆಗಿದ್ದಾರೆ.

ಸುಭಾಷ ಭವನದ ಶಂಕುಸ್ಥಾಪನೆಗೆ ಬರುವಂತೆ ಆಹ್ವಾನ ಕೊಟ್ಟಿದ್ದರಿಂದ ಫಾಫ್, ಅತ್ಯಂತ ಖುಷಿಯಿಂದ ಆಗಮಿಸಿದ್ದರು. 2000 ನೇ ಇಸವಿಯ ಮಾರ್ಚ್ 17 ರಂದು ಈ ಕಾರ್ಯಕ್ರಮ ಜರುಗಿತ್ತು. ಟ್ರಸ್ಟ್ ಹೊರ ತಂದಿದ್ದ ಸಚಿತ್ರ ಸುಭಾಷ' ಕೃತಿಯನ್ನೂ ಅವರು ಬಿಡುಗಡೆ ಮಾಡಿದ್ದರು. ಅನಿತಾ ಫಾಫ್ ಅವರನ್ನು ರಾಜ್ಯದ ಅತಿಥಿ'ಯೆಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೂಚಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಉಪ ಕಾರ್ಯದರ್ಶಿ ಆಗಿದ್ದ ಎನ್. ಪ್ರಕಾಶ್ ಬರೆದ ಪತ್ರವೂ ಇದೆ. ಅದನ್ನು ಸಭಾಪತಿ ಕಲ್ಮಣಕರ್ ಅವರ ಮಾಹಿತಿಗಾಗಿ ಕಳುಹಿಸಿ ಕೊಡಲಾಗಿತ್ತು.

ಚಿತ್ರವೂ ನಕಲಿ
ಅನಂತ್‌ಕುಮಾರ್ ಹೆಗಡೆ ಹಳಿಯಿಲ್ಲದೇ ರೈಲು ಓಡಿಸಿದ್ದಾರೆ ಎಂಬುದಕ್ಕೆ ಇನ್ನೊಂದು ಮಹತ್ವದ ಸಾಕ್ಷಿ ಅನಿತಾ ಫಾಫ್ ಭಾವಚಿತ್ರ. ಹೆಗಡೆಯ ಅದ್ಭುತ ಆವಿಷ್ಕಾರ'ದಿಂದ ಸಿಕ್ಕಿರುವ ಚಿತ್ರಕ್ಕೂ ಫಾಫ್ ಅವರ ಅಸಲಿ ಫೋಟೋಕ್ಕೂ ಯಾವ ಕೋನದಿಂದಲೂ ಹೊಂದಾಣಿಕೆ ಆಗುವುದಿಲ್ಲ. ರಾಜ್ಯದ ಹಾಲಿ ಮುಖ್ಯಮಂತ್ರಿ, ನೇತಾಜಿ ಸಂಸ್ಥೆಯ ಟ್ರಸ್ಟಿ ಆಗಿರುತ್ತಾರೆ. ಹೀಗಾಗಿ ಯಡಿಯೂರಪ್ಪ ಇದರ ಟ್ರಸ್ಟಿಯೂ ಹೌದು. ಜತೆಗೆ ಕೇಂದ್ರದ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೆಸರೂ ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ದಾಖಲಾಗಿದೆ.

(ಸ್ನೇಹಸೇತು : ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X