ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲಬರ್ಗಾ: ಸೆ.23ರಿಂದ ವಿಜ್ಞಾನ ವಸ್ತುಪ್ರದರ್ಶನ

By Staff
|
Google Oneindia Kannada News

Gulbarga
ಗುಲಬರ್ಗಾ,ಸೆ.23:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ದ್ವಿತೀಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2009ರ ಸೆಪ್ಟೆಂಬರ್ 23ರಿಂದ 25 ರವರೆಗೆ ಮೂರು ದಿನಗಳ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.

ಈ ವಸ್ತುಪ್ರದರ್ಶನದಲ್ಲಿ ಭಾರತೀಯ ಅಂತರಿಕ್ಷ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ವೈಮಾನಿಕ ಸಂಸ್ಥೆ( ಎನ್‌ಎಎಲ್), ಭಾರತೀಯ ವಿದ್ಯುನ್ಮಾನ ಸಂಸ್ಥೆ (ಬಿಇಎಲ್), ಭಾರತೀಯ ಬೃಹತ್ ವಿದ್ಯುನ್ಮಾನ ಸಂಸ್ಥೆ (ಬಿಹೆಚ್‌ಇಎಲ್), ಜಿಲ್ಲಾ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ವ್ಯಂಗ್ಯ ಚಿತ್ರಕಲಾವಿದರು ತಮ್ಮ ಮಾದರಿಯ ಸಾಧನೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಪ್ರದರ್ಶನವು ಉಚಿತವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಕೋರಿದ್ದಾರೆ.

ವೈಜ್ಞಾನಿಕ ಪ್ರಶಸ್ತಿಗಾಗಿ ಪದ್ಮಭೂಷಣ ಪ್ರೊ|| ರೊದ್ದಮ್ ನರಸಿಂಹ ಆಯ್ಕೆ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2009 ನೇ ಸಾಲಿನ ಪ್ರತಿಷ್ಠಿತ ವೈಜ್ಞಾನಿಕ ಪ್ರಶಸ್ತಿಗಾಗಿ ಪ್ರೊ|| ರೊದ್ದಮ್ ನರಸಿಂಹ ಅವರನ್ನು ಆಯ್ಕೆ ಮಾಡಿದೆ. ಪ್ರೊ|| ರೊದ್ದಮ್ ನರಸಿಂಹ ಅವರು ತಮ್ಮ ಶಿಕ್ಷಣವನ್ನು ಬೆಂಗಳೂರು ಮತ್ತು ಕ್ಯಾಲಿಫೋರ್ನಿಯಾದಲ್ಲಿ ಪಡೆದ ನಂತರ ರಾಷ್ಟ್ರೀಯ ವೈಮಾನಿಕ ಸಂಸ್ಥೆಯ ನಿರ್ದೇಶಕರಾಗಿ ತಮ್ಮ ದೀರ್ಘಕಾಲಿನ ಸೇವೆಯನ್ನು ಸಲ್ಲಿಸಿದರು. ಅವರು ಭಾರತೀಯ ಸುಪ್ರಸಿದ್ಧ ಅಂತರಿಕ್ಷ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ ಹಾಗೂ ಜಾಗತಿಕ ಶ್ರೇಷ್ಠ ಫ್ಲೂಯಿಡ್ ಡೈನಾಮಿಸಿಸ್ಟ್ ಆಗಿದ್ದಾರೆ. ಅವರು ಜವಾಹರಲಾಲ್ ನೆಹರು ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರದ ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X