ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂಗೆ ಹುಸಿ ಇಮೇಲ್ ;ಡಿಜಿಪಿ ನೇತೃತ್ವದಲ್ಲಿ ಸಭೆ

By Staff
|
Google Oneindia Kannada News

Ajay kumar singh
ಬೆಂಗಳೂರು, ಸೆ. 23:ಉದ್ಯಾನನಗರವನ್ನು 15 ಕೆಮಿಕಲ್ ಬಾಂಬ್ ಮೂಲಕ ಉಡಾಯಿಸುವುದಾಗಿ ಮುಖ್ಯಮಂತ್ರಿಗಳಿಗೆ ಸೆ. 22 ರಂದು ಬಂದಿದ್ದ ಇ ಮೇಲ್ ಹುಸಿ ಎಂದು ತಿಳಿದ ಮೇಲೂ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಮಹತ್ವದ ಸಭೆ ನಡೆಸಿದರು. ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ದಸರಾ ಮಹೋತ್ಸವದ ಸಂದರ್ಭದಲ್ಲಿ ಬೆಂಗಳೂರನ್ನು ಕೆಮಿಕಲ್ ಬಾಂಬ್ ಮೂಲಕ ಸ್ಫೋಟಿಸಲಾಗುವುದು. ನಂತರ ಮೈಸೂರು, ಮಂಗಳೂರನ್ನು ಟಾರ್ಗೆಟ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಪೊಲೀಸ್ ಮಹಾ ನಿರ್ದೇಶಕರು, ಆಯುಕ್ತ ಬಿದರಿ ಅವರಿಗೆ ಇ ಮೇಲ್ ಬಂದಿತ್ತು. ಇಮೇಲ್ ಬೆದರಿಕೆ ಹುಸಿ ಎಂದು ತನಿಖೆ ನಂತರ ತಿಳಿದುಬಂದರೂ ಪೊಲೀಸರು ರಾಜ್ಯದಲ್ಲಿ ಎಲ್ಲೆಡೆ ಹೈ ಅಲರ್ಟ್ ಸಂದೇಶ ರವಾನಿಸಿದ್ದಾರೆ.

ದಸರಾ ಸಂದರ್ಭದಲ್ಲಿ ಮೈಸೂರು ಹಾಗೂ ಮಂಗಳೂರಿನಲ್ಲಿ ವಿಶೇಷ ಭದ್ರತೆ ಕಲ್ಪಿಸಬೇಕು.ವಿಧ್ವಂಸಕ ಕೃತ್ಯ ತಡೆಗೆ ಯಾವ ಕಾನೂನು ಕ್ರಮ ಕೈಗೊಳ್ಳಬೇಕು. ಅಪರಾಧ ಪ್ರಕರಣ,ಬೀಟ್ ಸಿಸ್ಟಮ್, ನಕ್ಸಲ್ ಸಮಸ್ಯೆ. ಉಗ್ರಗಾಮಿ ಚಟುವಟಿಕೆಗಳ ಮೇಲೆ ನಿಗಾ ಇಡುವುದು. ಇತರೆ ಭದ್ರತೆ ವಿಷಯಗಳ ಕುರಿತು ಸಭೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಸಿಓಡಿ ಪೊಲೀಸ್ ಮಹಾ ನಿರ್ದೇಶಕ ಡಾ.ಡಿವಿ ಗುರುಪ್ರಸಾದ್, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಆರ್ ಇನ್ ಫ್ಯಾಂಟ್, ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸೇರಿದಂತೆ ರಾಜ್ಯದ ಎಲ್ಲಾ ನಗರಗಳ ಪೊಲೀಸ್ ಆಯುಕ್ತರು, ವಲಯ ವ್ಯಾಪ್ತಿಯ ಐಜಿಪಿಗಳು, ಗುಪ್ತದಳ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X