ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬಿ ತುಳುಕುತ್ತಿವೆ ನಾಡಿನ ಜಲಾಗಾರಗಳು

By Staff
|
Google Oneindia Kannada News

Harangi Dam
ಬೆಂಗಳೂರು, ಸೆ. 22 : ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಸುರುತ್ತಿರುವ ಪರಿಣಾಮ ಹೇಮಾವತಿ ಜಲಾಶಯ ತುಂಬಿತುಳುಕುತ್ತಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಯಾವುದೇ ಕ್ಷಣದಲ್ಲಿ ಕ್ರಸ್ಟ್ ಗೇಟ್ ತೆರೆದು ಹೆಚ್ಚುವರಿ ನೀರನ್ನು ಹೊರ ಬಿಡುವ ಸಾಧ್ಯತೆಯಿದೆ. ಜಲಾನಯನ ಪ್ರದೇಶದ ಅಚ್ಚುಕಟ್ಟುದಾರರು ಮತ್ತು ನದಿದಂಡೆಯ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಾಗಿದೆ. ಅತಿವೃಷ್ಟಿಯಿಂದ ಹಲವೆಡೆ ಮನೆಗಳು ಕುಸಿದಿದ್ದು, ಕೆರೆಗಳು ತುಂಬಿ ಹರಿದಿವೆ.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ 21 ಸೆಪ್ಟೆಂಬರ್ 2009 ರಂದು ವಿವಿಧ ಜಲಾಶಯಗಳಲ್ಲಿ ದಾಖಲಾದ ನೀರಿನ ಮಟ್ಟವನ್ನು ಈ ಕೆಳಗಿನ ಕೋಷ್ಟಕದಲ್ಲಿ ಗಮನಿಸಿ. ಗರಿಷ್ಠ ಮಟ್ಟ, ಶೇಖರವಾಗಿರುವ ನೀರಿನ ಮಟ್ಟ, ರಾಜ್ಯದಲ್ಲಿ ಮಳೆ ಮತ್ತು ಮಳೆ ನೀರಿನ ಶೇಖರಣೆಯೆ ಬಗೆಗಿನ ವಿಹಂಗಮ ನೋಟವನ್ನು ಈ ಅಂಕಿಅಂಶಗಳು ಬಿಂಬಿಸುತ್ತವೆ. ರಾಜ್ಯದಲ್ಲಿ ಈಗ ಉತ್ತರೆ ಮಳೆ ಆರಂಭವಾಗಿದೆ. ಇನ್ನಷ್ಟು ಧಾರಾಕಾರ ಮಳೆ, ಮತ್ತು ಕೆರೆಕಟ್ಟೆಗಳು ಭರ್ತಿಯಾಗುವ, ಉಕ್ಕಿ ಹರಿಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಜಲಾಶಯ ಪೂರ್ಣಮಟ್ಟ ಇಂದಿನ ಮಟ್ಟ ಒಳಹರಿವು
ಕೆಆರ್‌ಎಸ್ 124.80ಅಡಿ 123.93ಅಡಿ 29,875 ಕ್ಯೂಸೆಕ್ಸ್
ಲಿಂಗನಮಕ್ಕಿ 1819.00 1817.10 3,744
ತುಂಗಭದ್ರಾ 1633.00 1633.00 12,724
ಘಟಪ್ರಭಾ 2175.00 2175.00 1,930
ಆಲಮಟ್ಟಿ 519.60ಮೀ 519.60ಮೀ 9,340
ಬಸವಸಾಗರ 492.25 ಮೀ 492.05ಮೀ 10,000
ಕಬಿನಿ 2284.00 ಅ 2280.74ಅ 3,000
ಹಾರಂಗಿ 2859.00ಅ 2858.00ಅ 1,500
ಹೇಮಾವತಿ 2922.00 2922.00 6,500
ಭದ್ರಾ 186.00 186.00 6,171
(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X