ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯಲ್ಲಿ ಭಾರತದ ಬಾಲೆಯ ಭಾಷಣ

By Staff
|
Google Oneindia Kannada News

Yugratna Srivatsava
ನ್ಯೂಯಾರ್ಕ್, ಸೆ 22: ಲಖನೌ ನಗರದ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ 13 ವರ್ಷದ ಬಾಲೆ ಯುಗರತ್ನ ಶ್ರೀವಾಸ್ತವ, ಹವಾಮಾನ ಬದಲಾವಣೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಮಂಗಳವಾರ (ಸೆ 22) ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾಳೆ. ಈ ವರ್ಷ ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ನಡೆದ ಒಪ್ಪಂದದ ಅನುಸಾರ ಈ ಸಮಾವೇಶ ನಡೆಯುತ್ತಿದೆ.

ಹವಾಮಾನ ವೈಪರೀತ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ಕಾಳಜಿಯ ಬಗ್ಗೆ ವಿಶ್ವದ ಮೂರು ಶತಕೋಟಿ ಯುವಜನರು ಮತ್ತು ಮಕ್ಕಳ ಪರವಾಗಿ ಈಕೆ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾಳೆ. ನನ್ನ ಪೀಳಿಗೆಯ ಭಾರತೀಯರಿಗೆ ಹವಾಮಾನ ಬದಲಾವಣೆ ಎಂದರೆ ಜಾಗತಿಕ ತಾಪಮಾನ, ಅಹಾರದ ಕೊರತೆ, ಕುಡಿಯುವ ನೀರಿನ ಕೊರತೆ ಮತ್ತು ಕ್ಷಿಪ್ರವಾಗಿ ಹರಡುವ ಸಾಂಕ್ರಾಮಿಕ ರೋಗಗಳಿದ್ದಂತೆ" ಎಂದು ಯುಗರತ್ನ ಅಭಿಪ್ರಾಯ ಪಟ್ಟಿದ್ದಾಳೆ.

ಕಳೆದ ವರ್ಷ ನಾರ್ವೆಯಲ್ಲಿ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ ಅಂಗವಾಗಿ ನಡೆದ ಯುವ ಸಮ್ಮೇಳನದಲ್ಲಿ ಮತ್ತು ನೈರೋಬಿಯಲ್ಲಿ ನಡೆದ ಇನ್ನೊದು ಕಾರ್ಯಕ್ರಮದಲ್ಲೂ ಪಾಲ್ಗೊಂಡು ಪರಿಣಾಮಕಾರಿಯಾಗಿ ಭಾಷಣ ಮಾಡಿದ್ದಳು ಎಂದು ಯುಗರತ್ನ ತಂದೆ ಡಾ.ಅಲೋಕ್ ಶ್ರೀವಾಸ್ತವ ತಿಳಿಸಿದ್ದಾರೆ. ಬಾಲಕಿಯಾಗಿದ್ದಾಗಲೇ ಆಕೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಬರುವ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು ಎಂದೂ ಅವರು ತಿಳಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X