ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಂಖ್ಯೆ ನಿಯಂತ್ರಣ, ಆರೆಸ್ಸೆಸ್ ಕಾರ್ಯಸೂಚಿ

By Staff
|
Google Oneindia Kannada News

DK Shivakumar
ಬೆಂಗಳೂರು ಸೆ 21 : ಎಪ್ಪತ್ತರ ದಶಕದಲ್ಲೇ ದೇಶದಲ್ಲಿ ಕುಟಂಬ ಕಲ್ಯಾಣ ಯೋಜನೆ ಜಾರಿಯಲ್ಲಿದೆ ಮತ್ತು ಈ ಯೋಜನೆ ಸಾಕಸ್ಟು ಯಶಸ್ಸನ್ನೂ ಕಂಡಿದೆ. ಆದರೆ ರಾಜ್ಯ ಬಿಜೆಪಿ ಸರಕಾರ ಒಂದು ಕೋಮಿನ ಜನರನ್ನು ಓಲೈಸಲು ಇದನ್ನು ಚರ್ಚೆಯ ವಿಷಯವನ್ನಾಗಿ ಮಾಡಿದೆ. ಜನಸಂಖ್ಯೆ ನಿಯಂತ್ರಣವನ್ನು ಕಡ್ಡಾಯಗೊಳಿಸುವುದು ಆರ್ ಎಸ್ ಎಸ್ ಕಾರ್ಯಸೂಚಿಯಾಗಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚೀನಾ ಪ್ರವಾಸದ ನಂತರ ಮುಖ್ಯಮಂತ್ರಿಗಳು ಅಲ್ಲಿನ ಸರಕಾರದ ಕ್ರಮದಿಂದ ಪ್ರೇರೇಪಿತರಾಗಿರಬಹುದು, ಆದರೆ ಚೀನಾ ಕಮ್ಯೂನಿಸ್ಟ್ ಸಿದ್ದಾಂತವನ್ನು ಅಳವಡಿಸಿಕೊಂಡಿದೆ ಭಾರತ ಜ್ಯಾತ್ಯಾತೀತ ಸಿದ್ಧಾಂತವನ್ನು ನಂಬಿರುವ ದೇಶ ಎನ್ನುವುದನ್ನು ಯಡಿಯೂರಪ್ಪ ಮೊದಲು ತಿಳಿದುಕೊಳ್ಳಲಿ ಎಂದು ಡಿಕೆಶಿವಕುಮಾರ್ ಸರಕಾರವನ್ನು ಲೇವಡಿ ಮಾಡಿದ್ದರೆ. ಕುಟುಂಬ ಕಲ್ಯಾಣ ಯೋಜನೆ ಪಾಲಿಸದ ಕುಟುಂಬಗಳನ್ನು ಸರಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಲು ಹೊರಟರೆ ಅದು ಸಂವಿಧಾನಕ್ಕೆ ಅಗೌರವ ತೋರಿಸಿದಂತಾಗುತ್ತದೆ ಎಂದು ಡಿಕೆಶಿ ಸರಕಾರಕ್ಕೆ ಎಚ್ಚರಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X