ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಬಂಧನದಲ್ಲಿ ಉಗ್ರ ಹಫೀಜ್ ಸಯೀದ್

By Staff
|
Google Oneindia Kannada News

Hafeez Saeed
ಇಸ್ಲಾಮಾಬಾದ್, ಸೆ .21: 26 /11 ಮುಂಬೈ ದಾಳಿಯ ಪ್ರಮುಖ ರೂವಾರಿ ಜಮಾತ್-ಉದ್-ದವಾ ಉಗ್ರಗಾಮಿ ಸಂಘಟನೆಯ ಮುಖಂಡ ಹಫೀಜ್ ಮೊಹಮ್ಮದ್ ಸಯೀದ್‌ನನ್ನು ಪಾಕಿಸ್ತಾನ ಸರಕಾರ ಗೃಹ ಬಂಧನದಲ್ಲಿರಿಸಿದೆ. ಸಯೀದ್ ಮನೆಗೆ ಬಿಗಿ ಬಂದೋಬಸ್ತ್ ನೀಡಲಾಗಿದ್ದು ಆತನ ಚಲನವಲನದ ಮೇಲೆ ಸರಕಾರ ತೀವ್ರ ನಿಗಾ ಇರಿಸಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಗದ್ದಾಫಿ ಮೈದಾನದಲ್ಲಿ ಸಯೀದ್ ಗೆ ಈದ್ ಪ್ರಾರ್ಥನೆಗೆ ಅವಕಾಶ ನೀಡಿಲ್ಲ ಎಂದು ವರದಿಯಾಗಿದೆ. ಪೊಲೀಸ್ ತಂಡವನ್ನು ಸಯೀದ್ ಮನೆಯ ಹೊರಗೆ ಇರಿಸಲಾಗಿದ್ದು ಮತ್ತು ಆತನ ಚಲನವಲನ ನಿರ್ಬಂಧಿಸಲಾಗದಿದೆಯೆಂದು ತಿಳಿದು ಬಂದಿದೆ. ಆದರೂ ಸಯೀದ್ ಮುಂಬೈ ದಾಳಿಯ ಕಾರಣಕ್ಕಾಗಿ ಗೃಹ ಬಂಧನಕ್ಕೆ ಒಳಗಾಗಿದ್ದಾನೋ ಅಥವಾ ಭದ್ರತೆಯ ದೃಷ್ಟಿಯಿಂದ ಬಂಧಿಸಲಾಗಿದೆಯೋ ಎಂದು ಇನ್ನೂ ದೃಢ ಪಟ್ಟಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X