ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ಸಂಚಾರಿ ಬೆಂಗಳೂರು ಒನ್ ಕೇಂದ್ರ

By Staff
|
Google Oneindia Kannada News

Vidyashankar
ಬೆಂಗಳೂರು, ಸೆ. 21: ಮುಂಬರುವ ನವೆಂಬರ್ ವೇಳೆಗೆ ಮನೆ ಮನೆಗೆ ಬೆಂಗಳೂರು ಒನ್ ಕೌಂಟರ್ ತಲುಪಲಿದೆ. ನೀರಿನ ಬಿಲ್, ಕರೆಂಟ್ ಬಿಲ್ ಎಲ್ಲವನ್ನು ಮನೆ ಮುಂದೆ ಪಾವತಿಸಬಹುದು ಎಂದು ಪ್ರಧಾನ ಕಾರ್ಯದರ್ಶಿ ಎಂಎನ್ ವಿದ್ಯಾಶಂಕರ್ ಹೇಳಿದ್ದಾರೆ.

ಇ-ಗರ್ವನೆಂಸ್ ಆನ್ ವೀಲ್ಸ್ ಅಥವಾ ಮೊಬೈಲ್ ಬೆಂಗಳೂರು ಒನ್ ರಾಜ್ಯದ ಇ-ಗರ್ವನೆಂಸ್ ವಿಭಾಗದ ಪ್ರಮುಖ ಯೋಜನೆಯಾಗಿದೆ. ಐದು ಕಂಪ್ಯೂಟರ್ ಹೊಂದಿರುವ ಎರಡು ಸಂಚಾರಿ ವಾಹನಗಳು ನಿಗದಿತ ಸ್ಥಳಗಳಲ್ಲಿ ಬಿಲ್ ಪಾವತಿ ಕೇಂದ್ರಗಳಾಗಿ ನಿಲ್ಲಲಿವೆ. ಯಾವ ಸ್ಥಳದಲ್ಲಿ ಯಾವಾಗ ಸಂಚಾರಿ ಬೆಂಗಳೂರ್ ಒನ್ ನಿಲ್ಲಲಿದೆ ಎನ್ನುವುದು ಮೊದಲೇ ಹೇಳಲಾಗುವುದು ಎಂದರು.

ಇ-ಗರ್ವನೆಂಸ್ ತಿಳಿದ ಅಧಿಕಾರಿಗಳ ಕೊರತೆ ಎದುರಾಗಿದ್ದು ಸುಮಾರು 2 ಸಾವಿರ ತಜ್ಞರ ಅವಶ್ಯಕತೆಯಿದೆ. ಟಿಎ ಪೈ ಮ್ಯಾನಜ್ ಮೆಂಟ್ ಇನ್ ಸ್ಟಿಟ್ಯೂಟ್ ಹಾಗೂ ಎನ್ ಐ ಎಸ್ ಜಿ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು. ಬೆಂಗಳೂರು ಒನ್ ಕೇಂದ್ರಗಳನ್ನು ಎಲ್ಲಾ ಪ್ರಮುಖ ನಗರಗಳಿಗೆ ವಿಸ್ತರಿಸಲಾಗುವುದು ಎಂದು ವಿದ್ಯಾಶಂಕರ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X