ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ 'ಮೆಟ್ಟು' ಎಬ್ಬಿಸಿದ ಕೋಲಾಹಲ

By Staff
|
Google Oneindia Kannada News

Privilege notice against Kumaraswamy
ಬೆಂಗಳೂರು, ಸೆ. 17 : ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಸಿರುವ ಮೆಟ್ಟು ಪದ ವಿಧಾನಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿತು. ಆಡಳಿತ ಪಕ್ಷದ ಸದಸ್ಯರು ಪ್ರತಿಭಟಿಸಿ, ಕುಮಾರಸ್ವಾಮಿ ವಿರುದ್ದ ಹಕ್ಕು ಚ್ಯುತಿ ಹಾಗೂ ಖಂಡನಾ ನಿರ್ಣಯ ಮಂಡಿಸಿದರು. ಗಲಭೆಯಿಂದಾಗಿ ಸ್ಪೀಕರ್ ಜಗದೀಶ್ ಶೆಟ್ಟರ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.

ಬರ ಕುರಿತು ಯಡಿಯೂರಪ್ಪ ಹಾಗೂ ಕರುಣಾಕರರೆಡ್ಡಿ ಉತ್ತರಿಸಿದ ಬಳಿಕ, ಸಚಿವರಾದ ಬಿ ಎನ್ ಬಚ್ಚೇಗೌಡ ಮತ್ತು ಆರ್ ಅಶೋಕ್ ಅವರು ಕುಮಾರಸ್ವಾಮಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು. ಕುಮಾರಸ್ವಾಮಿ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು. ನೋಟಿಸ್ ಜಾರಿ ಮಾಡಬೇಕು ಎಂದು ಬಚ್ಚೇಗೌಡ ಒತ್ತಾಯಿಸಿದರು. ನಂತರ ಮಧ್ಯೆ ಪ್ರವೇಶಿಸಿದ ಸಿದ್ದರಾಮಯ್ಯ, ಮಾನ ಹಾನಿಯಾಗುವಂತ ಹೇಳಿಕೆ ಕೊಟ್ಟಿದ್ದರೆ ಕೇಸು ದಾಖಲಿಸಿ, ಕುಮಾರಸ್ವಾಮಿ ಸದನದ ಸದಸ್ಯರಲ್ಲ. ಹೀಗಾಗಿ ಚರ್ಚೆ ಅನಗತ್ಯ. ಹಕ್ಕುಚ್ಯುತಿ ಮಂಡಿಸುವಂತಿಲ್ಲ ಎಂದರು.

ಇಸ್ಟೀಟ್ ಆಟದಲ್ಲಿ ಎಲೆಗಳನ್ನು ಒಂದೊಂದಾಗಿ ಎಸೆಯುವಂತೆ ಸತ್ಯ ಹರಿಶ್ಚಂದ್ರನ ಮಕ್ಕಳ ಹಗರಣಗಳನ್ನು ಒಂದರ ನಂತರ ಮತ್ತೊಂದು ಬಯಲಿಗೆಳೆಯುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುಡುಗಿದ್ದಾರೆ.

ಕಲ್ಲಿದ್ದಲು ಖರೀದಿ ಹಗರಣ ಸಂಬಂಧ ತಮ್ಮ ವಿರುದ್ಧ ಟೀಕಿಸಿರುವ ಕುಮಾರಸ್ವಾಮಿ ಹಾಗೂ ರೇವಣ್ಣ ಬಗ್ಗೆ ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಕುಮಾರಸ್ವಾಮಿ ಮತ್ತು ರೇವಣ್ಣ ಕಲ್ಲಿದ್ದಲು ಹಗರಣದ ರೂವಾರಿಗಳು ಎಂದು ತಿರುಗೇಟು ನೀಡಿದ ಯಡಿಯೂರಪ್ಪ ಹಗರಣಗಳನ್ನು ಬಯಲಿಗೆಳೆಯುವ ಕಾರ್ಯ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಈಗಷ್ಟೇ ಆರಂಭವಾಗಿದೆ ಎಂದರು.

ಹಗರಣ ನ್ಯಾಯಾಂಗ ತನಿಖೆ ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ. ತನಿಖೆ ಶೀಘ್ರದಲ್ಲೇ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಲಾಗುವುದು. ರೇವಣ್ಣ ಕೆಪಿಸಿಎಲ್ ಅಧ್ಯಕ್ಷರಾಗಿದ್ದಾಗ ಟ್ರಾನ್ಸ್ ಫಾರ್ಮರ್ ಖರೀದಿ ಬಗ್ಗೆಯೂ ನ್ಯಾಯಾಂಗ ತನಿಖೆ ನಡೆಯಲಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X