ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನ ಸೂತ್ರ ವಿವರಿಸಿದ ಇನ್ಫಿ ಮೂರ್ತಿ

By Staff
|
Google Oneindia Kannada News

NR Narayanamurthy
ಬೆಂಗಳೂರು, ಸೆ. 17 : ಕಡಿಮೆ ಬಂಡವಾಳ ಹೂಡಿ ವಿನೂತನ ಮಾರ್ಕೆಟಿಂಗ್ ಕಲೆಗಳಿಂದ ಹೆಚ್ಚಿನ ಲಾಭ ಗಳಿಸುವತ್ತ ಉದ್ಯಮಿಗಳು ಯೋಚಿಸಬೇಕು ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಮೆಕ್ ಗ್ರಾ ಹಿಲ್ ಪ್ರೋಫೆಷನಲ್ ಹೊರತಂದ ಎಂಜಿನಿಯರ್ ಜೆಸ್ಸಿ ಪಾಲ್ ಅವರ ನೋ ಮನಿ ಮಾರ್ಕೆಟಿಂಗ್ ಪುಸ್ತಕವನ್ನು ನಗರದ ಕ್ರಾಸ್ ವರ್ಡ್ ನಲ್ಲಿ ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಉದ್ಯಮಿಯಾದವನಿಗೆ ಹೊಸಹೊಸ ಮಾರ್ಕೆಟಿಂಗ್ ತಂತ್ರಗಾರಿಕೆ ಅಳವಡಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ. ತಮ್ಮ ಕಂಪನಿಯನ್ನು ವಿನೂತನ ಅವಿಷ್ಕಾರದ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸುವ ಪ್ರಯತ್ನ ಮಾಡಬೇಕು. ಇನ್ಫೋಸಿಸ್ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕಂಪನಿ ಅಳವಡಿಸಿಕೊಂಡು ಬರುತ್ತಿರುವ ವಿನೂತನ ಮಾರ್ಕೆಟಿಂಗ್ ಸೂತ್ರಗಳೇ ಕಾರಣ ಎಂದು ಮೂರ್ತಿ ವಿವರಿಸಿದರು.

ಒಂದು ಕಾಲದಲ್ಲಿ ಕಾಲೇಜು ಕ್ಯಾಂಪಸ್ ಗಳಿಗೆ ಹೋದರೆ ಯಾವ ವಿದ್ಯಾರ್ಥಿಯೂ ಇನ್ಫೋಸಿಸ್ ನಲ್ಲಿ ಕೆಲಸಕ್ಕೆ ಸೇರಬೇಕೆಂದು ಹೇಳುತ್ತಿರಲಿಲ್ಲ. ಆದರೆ, ಈಗ ಶೇ. 75ರಷ್ಟು ವಿದ್ಯಾರ್ಥಿಗಳು ಪದವಿ ಮುಗಿಸಿ ಇನ್ಫೋಸಿಸ್ ಸೇರಲು ಬಯಸುತ್ತಿದ್ದಾರೆ. ಹೀಗಿರುವಾಗ, ಕಡಿಮೆ ಹೂಡಿಕೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬ್ರಾಂಡ್ ಆಗಿ ಬೆಳೆಯುವುದನ್ನು ಉದ್ಯಮಿಗಳು ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X