ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ನಿಲ್ಲದ ಜನಾಂಗೀಯ ದಾಳಿ

By Staff
|
Google Oneindia Kannada News

Attack on indian Students
ಮೆಲ್ಬೋರ್ನ್, ಸೆ. 15 : ಆಸೀಸ್ ಜನಾಂಗೀಯ ಪುಂಡಾಟಿಕೆಯನ್ನು ಆಸೀಸ್ ಗಳು ಮತ್ತೆ ಮುಂದುವರೆಸಿದ್ದು, ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಭಾರತೀಯರನ್ನು ನಿಂದಿಸಿದ್ದಲ್ಲದೇ ದಾಳಿ ನಡೆಸಿ ದಾರುಣವಾಗಿ ಥಳಿಸಿರುವ ಘಟನೆ ಇಪ್ಪಿಂಗ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.

ಸುಖ್ ದೀಪ್ ಸಿಂಗ್, ಗುರುದೀಪ್ ಸಿಂಗ್ ಮತ್ತು ಇವರ ಅಂಕಲ್ ಮುಕ್ತೇರ್ ಸಿಂಗ್ ಹಲ್ಲೆಗೊಳಗಾದ ಭಾರತೀಯರು. ಶನಿವಾರ ರಾತ್ರಿ ಈ ಮೂವರು ಭಾರತೀಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ಲೇಯಿಂಗ್ ಪೂಲ್ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಆಸ್ಟ್ರೇಲಿಯನ್ನರು ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ ಭಾರತೀಯರೇ ಸ್ವದೇಶಕ್ಕೆ ತೆರಳದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಸುವುದಾಗಿ ಕೆಲ ಯುವಕರು ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು 6 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ಸುಖ್ ದೀಪ್ ಸಿಂಗ್ ಅವರ ಕೆನ್ನೆ, ತಲೆ, ಕುತ್ತಿಗೆ ಎದೆಯ ಭಾಗಕ್ಕೆ ಭಾರಿ ಪ್ರಮಾಣ ಪೆಟ್ಟು ಬಿದ್ದಿದ್ದು, ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಳೆದ ಜೂನ್ ನಿಂದ ಅಗಸ್ಟ್ ವರೆಗೆ 30 ಭಾರತೀಯ ವಿದ್ಯಾರ್ಥಿಗಳ ಮೇಲೆ ಆಸೀಸ್ ವಿದ್ಯಾರ್ಥಿಗಳು ದಾಳಿ ನಡೆಸಿದ್ದಾರೆ. ಆಸೀಸ್ ಸರಕಾರ ಭಾರತೀಯ ವಿದ್ಯಾರ್ಥಿಗಳ ದಾಳಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳತ್ತೇವೆ ಎಂಬ ನೀಡಿದ ಭರವಸೆ ಬರೀ ಭರವಸೆಯಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X