ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಗಾಯಗೊಂಡ ಸಮುದಾಯ : ಜಸ್ವಂತ್ ಸಿಂಗ್

By Staff
|
Google Oneindia Kannada News

Jaswanth Singh
ಬೆಂಗಳೂರು, ಸೆ. 13 : ದೇಶ ವಿಭಜನೆಯ ಪರಿಣಾಮವಾಗಿ ಮುಸ್ಲಿಮರು ಭಾರತದಲ್ಲಿ 2ನೇ ದರ್ಜೆಯ ಪ್ರಜೆಗಳಾಗಿ ಪರಿಗಣಿತರಾಗಿದ್ದಾರೆ. ಅವರು ಗಾಯಗೊಂಡ ಸಮುದಾಯವಾಗಿದ್ದು, ನಾವು ಅದನ್ನು ಹಾಗೇ ಮುಂದುವರಿಸಿ ಕೊಂಡು ಹೋಗುತ್ತಿದ್ದೇವೆ ಎಂದು ಬಿಜೆಪಿಯ ಉಚ್ಚಾಟಿತ ಹಿರಿಯ ನಾಯಕ ಜಸ್ವಂತ್ ಸಿಂಗ್ ಹೇಳಿದರು.

ತಮ್ಮ ಜಿನ್ನಾ: ಇಂಡಿಯಾ- ಪಾರ್ಟಿಷನ್, ಇಂಡಿಪೆಂಡೆನ್ಸ್' ಕೃತಿಯನ್ನು ಬೆಂಗಳೂರಿನಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು. ತಾವು ಈ ಹಿಂದೆ ಅನೇಕ ಪುಸ್ತಕಗಳನ್ನು ಬರೆದಿದ್ದರೂ ಈ ಕೃತಿ ವಿವಾದಕ್ಕೊಳಗಾಗಿದೆ. ಇತಿಹಾಸವನ್ನು ನಾವು ವಸ್ತುನಿಷ್ಠವಾಗಿ ನೋಡುವ ದೃಷ್ಟಿಯನ್ನು ಇನ್ನೂ ಬೆಳೆಸಿಕೊಂಡಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದರು. ಜಿನ್ನಾ ಅವರು ಮಹಾತ್ಮ ಗಾಂಧಿ, ನೆಹರು, ಪಟೇಲ್ ಅವರ ಸಾಲಿನಲ್ಲಿ ನಿಲ್ಲಬಲ್ಲ ನಾಯಕರು. ವಿಭಜನೆಯ ದುರಂತಕ್ಕೆ ಜಿನ್ನಾ ಅವರೊಬ್ಬರೇ ಕಾರಣ ಎಂಬ ಭಾವನೆ ಬೆಳೆಸಲಾಗಿದೆ. ಅವರಲ್ಲಿ ಜಾತ್ಯತೀತ ವ್ಯಕ್ತಿತ್ವ ಇತ್ತು ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದೇನೆ ಎಂದು ಹೇಳಿದರು.

ಜಿನ್ನಾ ಅವರು ಇಂದಿನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೂ ತಪ್ಪಿತಸ್ಥರೆಂಬ ಭಾವನೆ ಪ್ರಚೋದಿಸುವಂಥ ಚಾರಿತ್ರಿಕ ವ್ಯಕ್ತಿಯಾಗಿದ್ದಾರೆ ಎಂದ ಹಿರಿಯ ಪತ್ರಕರ್ತ ಎಂ ಜೆ ಅಕ್ಬರ್, ಪುಸ್ತಕವನ್ನು ನಿಷೇಧಿಸಿ ಮಾರಾಟವನ್ನು ದ್ವಿಗುಣಗೊಳಿಸಿದ ಗುಜರಾತ್ ಸರಕಾರಕ್ಕೆ ಪ್ರಕಾಶಕರು ಧನ್ಯವಾದ ಹೇಳಬೇಕೆಂದು ವಿನೋದವಾಡಿದರು. ಜಿನ್ನಾ ಅವರ ಜಾತ್ಯತೀತ ನಿಲುವು ಕುರಿತು ಮಾತನಾಡಿರುವ ಜಸ್ವಂತ್ ಸಿಂಗ್, ಬಿಜೆಪಿಯ ಮೂಲಭೂತ ಸಿದಾಟಛಿಂತವನ್ನು ಒಡೆದು, ಹೊಸದಾಗಿ ರೂಪಿಸುವ ಕೆಲಸ ಮಾಡಿದ್ದರಿಂದಲೇ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಹಿರಿಯ ಲೇಖಕ ಪ್ರೊ. ನರೇಂದ್ರ ಪಾಣಿ ವಿಶ್ಲೇಷಿಸಿದರು. ನಿವೃತ್ತ ಏರ್ ಮಾರ್ಷಲ್ ಕೆ.ಸಿ.ನಂದಾ ಕಾರಿಯಪ್ಪ, ಕೃತಿ ಪ್ರಕಟಿಸಿದ ರೂಪಾ ಪ್ರಕಾಶನದ ಕವೀಶ್ ಮೆಹ್ರಾ ಉಪಸ್ಥಿತರಿದ್ದರು.

ಬಿಜೆಪಿಯನ್ನೇ ಕೇಳಿ !

ಬಿಜೆಪಿ ನಿಮ್ಮ ಮೇಲೆ ಮುಂದೇನು ಕ್ರಮ ಕೈಗೊಳ್ಳಬಹುದು ?' ಎಂಬ ಪ್ರಶ್ನೆಗೆ ಜಸ್ವಂತ್ ಅದನ್ನು ಬಿಜೆಪಿಯನ್ನೇ ಕೇಳಿ' ಎಂದು ಉತ್ತರಿಸಿ ನುಣುಚಿಕೊಂಡರು. ಕೃತಿ ನಿಷೇಧದ ಬಗ್ಗೆ ಮೌನ ವಹಿಸಿದ ಅವರು, ಪಕ್ಷದೊಳಗಿನ ರಾಜಕೀಯದ ಕುರಿತೂ ತುಟಿ ಬಿಚ್ಚಲಿಲ್ಲ. ಅವರ ಸುತ್ತ ಶ್ರೀಮಂತ ಇಂಗ್ಲಿಷ್ ಓದುಗರು ಹಾಗೂ ಬುದ್ಧಿಜೀವಿಗಳು ಬಿಟ್ಟರೆ ಬಿಜೆಪಿಯ ಯಾವುದೇ ನಾಯಕ ಇಲ್ಲವೇ ಕಾರ್ಯಕರ್ತ ಕಾಣಿಸಲಿಲ್ಲ.

ಪಾಕ್‌ನಿಂದ ಬೇಡಿಕೆ

ಪುಸ್ತಕ ಬಿಡುಗಡೆಯಾದ ಒಂದೇ ವಾರದಲ್ಲಿ 16,000ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. 20 ಬಾರಿ ಪ್ರಿಂಟ್ ಹಾಕಲಾಗಿದೆ. ಪಾಕಿಸ್ತಾನದಿಂದ ಹೆಚ್ಚುಬೇಡಿಕೆ ಬರುತ್ತಿದೆ ಎಂದು ರೂಪಾ ಪ್ರಕಾಶನದ ಕವೀಶ್ ತಿಳಿಸಿದರು.

(ಸ್ನೇಹಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X