ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 12 : ಜಸ್ವಂತ್ ಸಿಂಗ್ ವಿವಾದಿತ ಕೃತಿ ರಿಲೀಸ್

By Staff
|
Google Oneindia Kannada News

Jaswanth Singh
ಬೆಂಗಳೂರು, ಸೆ. 11 : ಬಿಜೆಪಿಯಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಜಸ್ವಂತ್ ಸಿಂಗ್ ಅವರ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪಂಡೆನ್ಸ್ ಪುಸ್ತಕ ಸೆ.12 ರಂದು ಲೀಲಾ ಪ್ಯಾಲೇಸ್ ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಸ್ವತಃ ಜಸ್ವಂತ್ ಸಿಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಕೃತಿ ಕುರಿತು ಚರ್ಚೆ, ಸಂವಾದ ನಡೆಯಲಿದೆ.

ಕೃತಿ ಬರೆದು ಬಿಜೆಪಿಯಿಂದ ಉಚ್ಚಾಟನೆಗೊಂಡ ನಂತರವೂ ತಮ್ಮ ನಿಲುವನ್ನು ಬದಲಿಸಿಕೊಳ್ಳದಿರುವ ಬಗ್ಗೆ ಜಸ್ವಂತ್ ಸಿಂಗ್ ಸುದೀರ್ಘವಾಗಿ ಮಾತನಾಡಲಿದ್ದಾರೆ. ಪುಸ್ತಕಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ಸಂಗತಿಗಳನ್ನು ಸಿಂಗ್ ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಎಂಜೆ ಅಕ್ಬರ್, ನಿವೃತ್ತ ಏರ್ ಮಾರ್ಷಲ್ ಕೆಸಿ ನಂದಕಾರ್ಯಪ್ಪ ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿನ್ನಾ ಇಂಡಿಯಾ ಇಂಡಿಪೆಂಡೆನ್ಸ್ ಪುಸ್ತಕದಲ್ಲಿ ಪಾಕಿಸ್ತಾನದ ಪಿತಾಮಹ ಮೊಹ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿಸಲಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಟೀಕಿಸಲಾಗಿದೆ. ಅಲ್ಲದೇ ಅಖಂಡ ಭಾರತ ವಿಭಜನೆಯಾಗಲು ಈ ಇಬ್ಬರು ನಾಯಕರು ಕಾರಣ. ಜಿನ್ನಾ ಅವರಿಗೆ ದೇಶದ ವಿಭಜನೆ ಮಾಡುವ ಉದ್ದೇಶ ಇರಲಿಲ್ಲ ಎಂಬ ಸಂಗತಿ ಪುಸ್ತಕದಲ್ಲಿದ್ದರಿಂದ ಬಿಜೆಪಿಯಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದ ಕೃತಿ ಇದೆ.

ಇದೇ ಕಾರಣಕ್ಕೆ ಪಕ್ಷದ ತತ್ತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಟೀಕಿಸಲಾಗಿದೆ ಎನ್ನುವ ನೆಪವಿಟ್ಟುಕೊಂಡು ಗುಜರಾತ್ ನಲ್ಲಿ ಪುಸ್ತಕ ನಿಷೇಧಕ್ಕೆ ಆದೇಶ ಹೊರಡಿಸಿದ್ದರು. ನಂತರ ಸುಪ್ರಿಂಕೋರ್ಟ್ ಸರಕಾರದ ನಿಷೇಧವನ್ನು ವಜಾಗೊಳಿಸಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಅಂತಹ ಸಾಹಸ ಕೈಹಾಕಲಿಲ್ಲ. ನಾಳೆ ಬಿಡುವಾದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಾಡಿಕೊಳ್ಳಬೇಡಿ. ಸ್ಥಳ : ಲೀಲಾ ಪ್ಯಾಲೇಸ್ ಶ್ರೀಮಂತರ ಹೋಟೆಲ್ ನಲ್ಲಿ ಬಿಡುಗಡೆ ಕಾರ್ಯಕ್ರಮವಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X