ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತಾರಿ ಸರಣಿ ಹತ್ಯಾಕಾಂಡ : ಮೊನಿಂದರ್ ನಿರ್ದೋಷಿ

By Staff
|
Google Oneindia Kannada News

Moninder Singh Koli
ಅಲಹಾಬಾದ್, ಸೆ. 11 : ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನಿತಾರ ಸರಣಿ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಅವರನ್ನು ಅಲಹಾಬಾದ್ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿದೆ. ಆದರೆ, ಇನ್ನೊಬ್ಬ ಆರೋಪಿ ಸುರಿಂದರ್ ಕೋಲಿಗೆ ಗಾಜಿಯಾಬಾದ್ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಇಮ್ತಿಯಾಜ್ ಮೂರ್ತಜಾ ಮತ್ತು ಕೆಎನ್ ಪಾಂಡೆ ನೇತೃತ್ವದ ವಿಭಾಗೀಯ ಪೀಠ, ಮೊನಿಂದರ್ ಸಿಂಗ್ ಪಂಧೇರ್ ಅವರ ವಿರುದ್ದ ಸಾಕ್ಷ್ಯಾಧಾರಗಳ ಕೊರತೆಯಿದ್ದು, ಅವರನ್ನು ನಿರ್ದೋಷಿ ಎಂದು ಹೇಳಿದೆ. ನಿತಾರದ ಮನೆಯೊಂದರಲ್ಲಿ 14 ವರ್ಷದ ಬಾಲಕಿ ರಿಂಪಾ ಹಲ್ದಾರ್ ಳನ್ನು ಅತ್ಯಾಚಾರ ಮಾಡಿ ಕೊನೆಗೆ ಹತ್ಯೆಗೈದ ಪ್ರಕರಣದಲ್ಲಿ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಸುರಿಂದರ್ ಕೊಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಆದರೆ, ನ್ಯಾಯಾಲಯದ ಅದೇಶ ರಿಂಪಾ ಕುಟುಂಬ ಸದಸ್ಯರಿಗೆ ತೀವ್ರ ಅಘಾತವನ್ನುಂಟು ಮಾಡಿದ್ದು, ಅಲಹಾಬಾದ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಇದೇ ಫೆಬ್ರುವರಿಯಲ್ಲಿ ತಿಂಗಳಲ್ಲಿ ಗಾಜಿಯಾಬಾದ್ ನ್ಯಾಯಾಲಯ ಮೊನಿಂದರ್ ಸಿಂಗ್ ಪಂದೇರ್ ಮತ್ತು ಸುರಿಂದರ್ ಕೂಲಿ ಅವರಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಪ್ರಕರಣದಲ್ಲಿ ಮೊನಿಂದರ್ ಸಿಂಗ್ ಪಂದೇರ್ ಅವರ ಕೈವಾಡವಿಲ್ಲ ಎಂದು ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. 2006 ಏಪ್ರಿಲ್ 27 ರಂದು ರಿಂಪಾ ಹಲ್ದಾರ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನೊಯಿಡಾ ಬಳಿ ಇರುವ ನಿತಾರದಲ್ಲಿ ನಡೆದಿತ್ತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X