ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದು ಮುಂದುವರೆಸಿ, ನಾನಿದ್ದೇನೆ ಎಂದು ಯಡ್ಡಿ

By Staff
|
Google Oneindia Kannada News

Yeddyuappa
ಬೆಂಗಳೂರು, ಸೆ. 9 : ಪ್ರತಿಭಾವಂತ ವಿದ್ಯಾರ್ಥಿಗಳೆ ಉನ್ನತ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಮಸ್ಯೆ ಮುಂದಿಟ್ಟುಕೊಂಡು ಭವ್ಯವಾದ ಕನಸನ್ನು ಮೊಟಕುಗೊಳಿಸಬೇಡಿ. ರಾಜ್ಯದ ಯಾವ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆ ಇದ್ದರೆ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯಿರಿ. ಮುಖ್ಯಮಂತ್ರಿ ಕಚೇರಿ ನಿಮ್ಮ ಓದಿಗೆ ನೆರವು ನೀಡಲು ಸದಾಸಿದ್ಧ. ಇಂತಹದ್ದೊಂದು ಭರವಸೆಯನ್ನು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.

ಇಲ್ಲಿನ ಸರಕಾರಿ ಕಲಾ ಕಾಲೇಜಿನ ಆವರಣದಲ್ಲಿ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಆರು ಅಂಶಗಳ ಹೊಸಹೆಜ್ಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸರ್ವರಿಗೆ ಸಮಪಾಲು ಎಂದು ಹೇಳುತ್ತಾ ಬಂದಿದ್ದರೂ ಶೇ.11ರಷ್ಟು ಜನರಿಗೆ ಮಾತ್ರ ಉನ್ನತ ಶಿಕ್ಷಣ ಸೌಲಭ್ಯ ತಲುಪಲು ಸಾಧ್ಯವಾಗಿದೆ. ಇದನ್ನು ಶೇ.25ಕ್ಕೇರಿಸುವ ಗುರಿ ತಮ್ಮ ಸರ್ಕಾರದ್ದು. ಹಾಸ್ಟೆಲ್, ವಿದ್ಯಾರ್ಥಿ ವೇತನ, ಬ್ಯಾಂಕಿನ ಸಾಲ ಎಲ್ಲವನ್ನು ನೀಡಿದರೂ ಎಲ್ಲರೂ ಉನ್ನತ ಶಿಕ್ಷಣ ಪಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಅವರು ನುಡಿದರು.

ಇನ್ನು ಮುಂದೆ ರಾಜ್ಯ ಯಾವುದೇ ಭಾಗದ ವಿದ್ಯಾರ್ಥಿಗೆ ಉನ್ನತ ಶಿಕ್ಷಣ ಮುಂದುವರೆಸಲು ಸಾದ್ಯವಾಗದೇ ಇದ್ದರೆ ತಮಗೆ ನೇರವಾಗಿ ಪತ್ರ ಬರೆಯಿರಿ. ನಿಜವಾಗಿಯೂ ಆರ್ಥಿಕವಾಗಿ ಸಂಕಷ್ಟವಿದ್ದರೆ ಅಂತಹ ವಿದ್ಯಾರ್ಥಿಯ ನೆರವಿಗೆ ನಿಲ್ಲಲು ಸರಕಾರ ಬದ್ಧ ಎಂದು ಯಡಿಯೂರಪ್ಪ ಘೋಷಿಸಿದರು. ಡಾಕ್ಟರ್, ಇಂಜಿನಿಯರ್, ಸರಕಾರಿ ನೌಕರರ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ದೊಡ್ಡ ಮಾತಲ್ಲ. ಕೂಲಿ, ಕೃಷಿ ಕಾರ್ಮಿಕರ ಮಕ್ಕಳು ವೈದ್ಯರು, ಇಂಜಿನಿಯರ್ ಆಗಬೇಕು. ಇದು ಸರಕಾರದ ಆಶಯ. ಅಂತಹ ವಿದ್ಯಾರ್ಥಿಗಳಿಗೆ ಸರಕಾರ ಧನ ಸಹಾಯ ಮಾಡಲಿದೆ ಎಂದು ಅವರು ಮತ್ತೊಮ್ಮೆ ಪುನರುಚ್ಛರಿಸಿದರು.

ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ವಿಳಾಸ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
'ಕೃಷ್ಣಾ' ಕುಮಾರಕೃಪ ರಸ್ತೆ
ಬೆಂಗಳೂರು-560 001

ಮುಖ್ಯಮಂತ್ರಿಯವರ ಕಚೇರಿ
ಮೂರನೇ ಮಹಡಿ. ವಿಧಾನಸೌಧ
ಡಾ ಬಿಆರ್ ಅಂಬೇಡ್ಕರ್ ವೀದಿ
ಬೆಂಗಳೂರು-560 001

ಈ ಮೇಲ್: [email protected]

ವೆಬ್ ಸೈಟ್ :http://yeddyurappa.in/

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X