ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಶ : ಭಾರದ್ವಾಜ್

By Staff
|
Google Oneindia Kannada News

HR Bharadhwaj
ಬೆಂಗಳೂರು, ಸೆ. 6 : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ದಿಟ್ಟ ನಿಲುವು ತಾಳುವುದಾಗಿ ಹೇಳಿದ್ದಾರೆ.

ಜೂನ್ 30 ರಂದು ರಾಜ್ಯಪಾಲರಾಗಿ ನಿಯೋಜಿತರಾದ ಅವರು ಶನಿವಾರ ಮಾಧ್ಯಮದ ಜೊತೆಗೆ ಮಾತನಾಡಿ, ರಾಜ್ಯದಲ್ಲಿ ಜಾತಿ- ಧರ್ಮದ ಹೆಸರಿನಲ್ಲಿ ಜನತೆಯನ್ನು ವಿಭಜಿಸುವ ಕೆಲಸಗಳು ನಡೆಯುತ್ತಿವೆ. ನಾನು 20 ವರ್ಷಗಳಿಂದ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದೆ. ಇದು ಸೌಹಾರ್ದತೆಗೆ ಹೆಸರಾಗಿದ್ದ ರಾಜ್ಯ, ಯಾವತ್ತೂ ಈ ರೀತಿ ಸೌಹಾರ್ದತೆಯನ್ನು ಕದಡುವ ಪ್ರಯತ್ನಗಳು ನಡೆದಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಲ್ಲ ಸಮುದಾಯದ ಜನತೆಯ ಹಿತ ಕಾಯುವ ದಿಸೆಯಲ್ಲಿ ರಾಜ್ಯಪಾಲರ ಕರ್ತವ್ಯವೇನು ಎಂಬ ಪ್ರಶ್ನಿಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರಿದೆ ತೊಂದರೆ ಆಗುತ್ತಿರುವ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ. ಬಹುಸಂಖ್ಯಾತರಿಂದ ಅಂತಹ ದೂರುಗಳು ಬರುತ್ತಿಲ್ಲ. ತೊಂದರೆಗೊಳಗಾದವರ ಸಮಸ್ಯೆ ನಿವಾರಿಸುವುದು ನನ್ನ ಕೆಲಸ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X