ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ

By Staff
|
Google Oneindia Kannada News

YSR supporters on suicide spree
ಹೈದರಾಬಾದ್, ಸೆ. 4 : ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣದಿಂದ ದಿಗ್ಭ್ರಾಂತರಾದ ಆಂಧ್ರಪ್ರದೇಶ ಜನತೆ ಹೃದಯಘಾತ, ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಸಾವನ್ನಪ್ಪಿರುವವರ ವೈಎಸ್ಆರ್ ಅಭಿಮಾನಿಗಳ ಸಂಖ್ಯೆ ನಾನಾ ಮಾಧ್ಯಮಗಳ ಪ್ರಕಾರ 100 ಗಡಿ ದಾಟಿದೆ.

ತೆಲುಗು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದಿದ್ದ ಎನ್ ಟಿ ರಾಮರಾವ್ ಅವರ ನಿಧನಕ್ಕಿಂತ ವೈಎಸ್ಆರ್ ಸಾವು ಜನಸಾಮಾನ್ಯರ ಭಾರಿ ಪ್ರಭಾವ ಬೀರಿದೆ. ಬಹುಶಃ ಭಾರತದ ರಾಜಕಾರಣದ ಇತಿಹಾಸದಲ್ಲಿ ಯಾವ ನೇತಾರರಿಗೂ ಇಂತಹ ಭಾವನಾತ್ಮಕ ದೃಶ್ಯ ಸಿಗುವುದು ಅಪರೂಪ. ನಲ್ಲಮಲ್ಲ ಅರಣ್ಯದಲ್ಲಿ ಹೆಲಿಕ್ಯಾಪ್ಟರ್ ಕಾಣೆಯಾಗಿ ವೈಎಸ್ಆರ್ ನಾಪತ್ತೆಯಾಗಿದ್ದಾರೆ ಎನ್ನುವುದು ಅಲ್ಲಿಯ ಜನತೆಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿತ್ತು. ನೆಚ್ಚಿನ ನಾಯಕ, ಬಡವರ ಬಂಧು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ ಎಂದು ಸುದ್ದಿ ಮುಟ್ಟುತ್ತಿದ್ದಂತೆಯೇ ಆಂಧ್ರಪ್ರದೇಶ ಕುಸಿದು ಕುಳಿತಿತು.

ಜನಸಾಮಾನ್ಯರಿಗೆ ಗಾಢ್ ಫಾದರ್ ಆಗಿದ್ದ ವೈಎಸ್ಆರ್ ಸಾವು ಅವರಿಗೆ ಬರಸಿಡಿಲಿನಂತಾಗಿತ್ತು. ಅನೇಕರು ಅತ್ಮಹತ್ಯೆ ಮಾಡಿಕೊಂಡರು, ಹಲವರು ಹೃದಯಾಘಾತದಿಂದ ಮೃತಪಟ್ಟರು, ಅಸಂಖ್ಯ ಜನರು ಆಸ್ಪತ್ರೆಗೆ ಸೇರಿದ್ದಾರೆ. ಮತ್ತೊಂದಿಷ್ಟು ಮಂದಿ ವೈಎಸ್ಆರ್ ಸಾವು ನಮಗೆ ತುಂಬಲಾರದ ನಷ್ಟವಾಗಿದೆ. ಅವರ ಹುದ್ದೆ ತುಂಬಲು ಅವರ ಮಗ ಜಗನ್ಮೋಹನ್ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜಶೇಖರರೆಡ್ಡಿ ಅವರನ್ನು ಜನಸಾಮಾನ್ಯರು ಏಕೆ ಅಷ್ಟೊಂದು ಪ್ರೀತಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಕಾರಣವಿದೆ. ವೈಎಸ್ಆರ್ ಬರೀ ಮುಖ್ಯಮಂತ್ರಿ ಆಗಿರಲಿಲ್ಲ. ಬಡವರ ಬಂಧು ಆಗಿದ್ದರು. ಗ್ರಾಮದಲ್ಲಿರುವ ಕಟ್ಟಕಡೆಯ ಪ್ರಜೆಗೂ ಸರಕಾರಿ ಸವಲತ್ತುಗಳು ಸಿಗಬೇಕು ಎಂಬ ಏಕೈಕ ಗುರಿ ಹೊಂದಿದ್ದ ರೆಡ್ಡಿ ಅವರ ಮಾನವೀಯ ಚಿಂತನೆಯೇ ಜನರ ಅತಿರೇಕದ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಜನಸಾಮಾನ್ಯರ ಏಳ್ಗೆಗೆ ಅವರು ಕೈಗೊಂಡ ಆರೋಗ್ಯಶ್ರೀ, ಜಲಯಜ್ಞ, ಶೇ. 3ರ ಬಡ್ಡಿ ಸಾಲ, ವಯೋವೃದ್ಧರಿಗೆ ಮಾಶಾಸನ ಸೇರಿ ಅನೇಕ ಜನಪರ ಕಾರ್ಯಕ್ರಮಗಳು ರೆಡ್ಡಿ ಅವರು ಜನರಿಗೆ ಮತ್ತಷ್ಟು ಹತ್ತಿರವಾದರು.

ವೈಎಸ್ಆರ್ ನಿಧನದ ಸುದ್ದಿ ಕೇಳಿ ತಿಂಗಳು ಮಾಶಾಸನ ಪಡೆಯುತ್ತಿದ್ದ ವಿಕಾಲಾಂಗ ದಂಪತಿ ಮುಂದಿನ ಜೀವನ ಹೇಗೆ ಎಂದು ದೊಡ್ಡ ಪ್ರಶ್ನೆಯಾಗಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರಿಗಾಗಿ ಜೀವನ ತ್ಯಾಗ ಮಾಡಿದ ವೈಎಸ್ಆರ್ ಗೆ, ಅವರಿಗಾಗಿ ನನ್ನ ಜೀವನ ತ್ಯಾಗ ಮಾಡುವೆ ಎಂದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ.

ರಾಜ್ಯ ತುಂಬಾ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ವೈಎಸ್ಆರ್ ಮಗ ಜಗನ್ಮೋಹನ್ ರೆಡ್ಡಿ, ಸಾರ್ವಜನಿಕರಲ್ಲಿ ಶಾಂತಿ ಸಮಾಧಾನದಿಂದ ವರ್ತಿಸಿ, ಅತ್ಮಹತ್ಯೆಯಂತಹ ಭೀಕರ ಕೆಲಸ ಕೈಹಾಕಬೇಡಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ. ನಾವು ನೀವು ಎಲ್ಲರೂ ಸೇರಿ ತಂದೆಯನ್ನು ಬಿಳ್ಕೊಡೋಣ ಎಂದು ಮಾಡಿಕೊಂಡ ಮನವಿಯನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅಭಿಮಾನಿಗಳಿಲ್ಲ. ಒಟ್ಟಿನಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲಿ ವೈಎಸ್ಆರ್ ದುರಂತ ಅಂತ್ಯ ಮತ್ತೊಂದು ಇತಿಹಾಸವನ್ನು ಹುಟ್ಟು ಹಾಕಿದ್ದಂತೂ ಸುಳ್ಳಲ್ಲ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X