ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತ್ಯಕ್ರಿಯೆಗೆ ಮುನ್ನವೇ ಗದ್ದುಗೆಗೆ ಲಾಬಿ

By Super
|
Google Oneindia Kannada News

YS Rajasekhara Reddy
ಹೈದರಾಬಾದ್, ಸೆ. 4 : ಎಂಥ ಮಹಾನ್ ನಾಯಕರು, ಜನಪರ ಜನಪ್ರತಿನಿಧಿಗಳು ಸತ್ತರೂ ರಾಜಕೀಯ ಮಾತ್ರ ನಿಲ್ಲುವುದಿಲ್ಲ. ರಾಜಶೇಖರ್ ರೆಡ್ಡಿ ಅಂತ್ಯಕ್ರಿಯೆ ಇನ್ನೂ ಮುಗಿದಿಲ್ಲ, ಆಗಲೇ ಆಂಧ್ರ ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ತೀವ್ರ ಲಾಬಿ ಶುರುವಾಗಿದೆ. ವೈ ಎಸ್ ಆರ್ ಪುತ್ರ ಪ್ರಸಕ್ತ ಕಡಪ ಕ್ಷೇತ್ರದ ಸಂಸದ ಜಗನ್ಮೋಹನ್ ರೆಡ್ಡಿ ಈ ಪೈಪೋಟಿಯಲ್ಲಿ ಮಂಚೂಣಿಯಲ್ಲಿದ್ದಾರೆ.

ವೈ ಎಸ್ ಆರ್ ಉತ್ತರಾಧಿಕಾರಿಯನ್ನಾಗಿ ಜಗನ್ಮೋಹನ್ ಅವರನ್ನೇ ಮಾಡಬೇಕೆಂದು ಆಗಲೇ ಶಾಸಕರ ಸಹಿ ಸಂಗ್ರಹ ಬಿರುಸಿನಿಂದ ನಡೆಯುತ್ತಿದೆ. ಪಕ್ಷದ 122 ಶಾಸಕರು ಇವರ ಪರವಾಗಿ ಸಹಿಯನ್ನು ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅನಂತಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆಯನ್ನೂ ನಡೆಸಿದ್ದಾರೆ.

ಜಗನ್ಮೋಹನ್ ಅಲ್ಲದೆ ಹಣಕಾಸು ಸಚಿವ ಮತ್ತು ಹಂಗಾಮಿ ಸಿಎಂ ರೋಶಯ್ಯ, ಕೇಂದ್ರ ಸಚಿವ ಜೈಪಾಲ್ ರೆಡ್ಡಿ, ಆಂಧ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀನಿವಾಸ್, ಎನ್ ಟಿ ಆರ್ ಮಗಳು ಮತ್ತು ಕೇಂದ್ರ ಸಚಿವೆ ಪುರಂದರೇಶ್ವರಿ, ವೈ ಎಸ್ ಆರ್ ಪಾಲಿನ 'ಮಾನಸ ಸಹೋದರಿ' ಗೃಹ ಸಚಿವೆ ಸಬಿತಾ ಅವರ ಹೆಸರುಗಳು ಸಿಎಂ ಪಟ್ಟಕ್ಕಾಗಿ ಮಂಚೂಣಿಯಲ್ಲಿ ಬಂದು ನಿಂತಿವೆ.

ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಹೈಕಮಾಂಡ್ ಸೋನಿಯಾ ಗಾಂಧಿ ಅವರ ಚಿಂತನಾಲಹರಿ ಯಾರಿಗೆ ಒಲಿಯುತ್ತದೋ. ಯಥಾಸ್ಥಿತಿಗೆ ಅಂಟಿಕೊಂಡರೆ, ಜಗನ್ಮೋಹನ್ ರೆಡ್ಡಿಯೇ ಅಪ್ಪನ ಸ್ಥಾನಕ್ಕೆ ಬರುವುದು ನಿಶ್ಚಿತ. ಇದೆಲ್ಲವನ್ನೂ ಲೆಕ್ಕ ಹಾಕಿ ಅವರು ಲಾಬಿಯನ್ನು ಶುರು ಹಚ್ಚಿಕೊಂಡಿದ್ದಾರೆ.

(ಏಜನ್ಸೀಸ್)

English summary
YS Rajasekhara Reddy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X