ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಭೂತಗಳಲ್ಲಿ ವೈಎಸ್ಆರ್ ಲೀನ

By Staff
|
Google Oneindia Kannada News

ಇಡುಪುಲಪಾಯ, (ಕಡಪಾ), ಸೆ. 4 : ಅಪಾರ ಜನಸ್ತೋಮದ ಮಧ್ಯೆ ಸಕಲ ಸರಕಾರಿ ಗೌರವಗಳೊಂದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಂತಿಮ ಸಂಸ್ಕಾರವನ್ನು ಹುಟ್ಟೂರು ಇಡುಪುಲಪಾಯದ ಅವರ ಆರ್ ಕೆ ವ್ಯಾಲಿ ಎಸ್ಟೇಟ್ ನಲ್ಲಿ ನೆರವೇರಿಸಲಾಯಿತು. ಕ್ರೈಸ್ತ ಧರ್ಮದ ವಿಧಿವಿಧಾನದಂತೆ ತೆಲುಗು ನೆಲದ ಅಗ್ರಮಾನ್ಯ ಜನನಾಯಕನಿಗೆ ಶೋಕಸಾಗರದ ಮೂಲಕ ಬಿಳ್ಕೊಡಲಾಯಿತು. 'ಪುಲಿವೆಂದುಲ ಪುಲಿ'ಎಂದೇ ಖ್ಯಾತರಾಗಿದ್ದ ವೈಎಸ್ಆರ್ ಇನ್ನೂ ಬರೀ ನೆನಪು ಮಾತ್ರ.

ಅಕಾಲಿಕ ಮರಣಕ್ಕೆ ತುತ್ತಾದ ನಾಯಕ ವೈಎಸ್ಆರ್ ಹುಟ್ಟೂರು ಇಡುಪುಲಪಾಯದಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ ಲಕ್ಷಾಂತರ ಜನ ಇಡುಪುಲಪಾಯಕ್ಕೆ ದೌಡಾಯಿಸಿದ್ದು ರೆಡ್ಡಿ ಅವರ ನಾಯಕತ್ವಕ್ಕೆ ಸಾಕ್ಷಿಯಾಗಿತ್ತು. ಆಂಧ್ರಪ್ರದೇಶದ ರಾಜಕೀಯದಲ್ಲಿ ಅಪ್ಪಟ ಮಾಸ್ ಲೀಡರ್ ಆಗಿ ರೂಪುಗೊಂಡಿದ್ದ ವೈಎಸ್ಆರ್, ಸದಾ ಬಡವರ ಏಳ್ಗೆಗೆ ಕುರಿತು ಚಿಂತಿಸುತ್ತಿದ್ದ ಜನನಾಯಕರಾಗಿದ್ದರು. ಅಂತ್ಯಸಂಸ್ಕಾರದ ವೇಳೆ ಪೊಲೀಸರಿಗೆ ಇಡುಪುಲಪಾಯದಲ್ಲಿ ಜನರನ್ನು ನಿಯಂತ್ರಿಸುವುದೇ ದೊಡ್ಡ ವಸಾಲಾಗಿ ಪರಿಣಮಿಸಿತು. ಸಚಿವರು, ಹಿರಿಯ ಅಧಿಕಾರಿಗಳು ಶಾಂತಿವಾಗಿರಿ ಎಂದು ಮನವಿ ಮಾಡಿಕೊಂಡರು, ನೆಚ್ಚಿನ ನಾಯಕನನ್ನು ಕಣ್ಣಾರೆ ಕಾಣಬೇಕೆನ್ನುವ ಅತುರದಿಂದ ನೂಕುನುಗ್ಗಲು ಕೂಡಾ ನಡೆಯಿತು. ಜನಸಾಗರದ ಸಮಸ್ಯೆಯಿಂದಾಗಿ ವೈಎಸ್ಆರ್ ಕುಟುಂಬ ಸದಸ್ಯರು ಆರ್ಮಿ ಹೆಲಿಕ್ಯಾಪ್ಟರ್ ನಲ್ಲಿಯೇ ಅವರ ಅಂತಿಮ ದರ್ಶನ ಪಡೆದುಕೊಂಡರು.

ಇದಕ್ಕೆ ಮುನ್ನ ಹೈದರಾಬಾದ್ ನ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಪಾರ್ಥೀವ ಶರೀರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾಸ್ವಾಮಿ, ಕೇಂದ್ರದ ಅಷ್ಟೂ ಸಚಿವರು, ದೇಶದ ಬಹುತೇಕ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಸಚಿವರು ವೈಎಸ್ ರಾಜಶೇಖರರೆಡ್ಡಿ ಅವರ ಅಂತಿಮ ದರ್ಶನ ಪಡೆದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X