ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ : ಜಸ್ವಂತ್ ಸಿಂಗ್ ಪುಸ್ತಕ ನಿಷೇಧ ಹಿಂತೆಗೆತ

By Staff
|
Google Oneindia Kannada News

Gujarat High Court lifts ban on Jaswant s book on Jinnah
ಅಹಮದಾಬಾದ್, ಸೆ. 4 : ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಪುಸ್ತಕ ಮೇಲೆ ಗುಜರಾತ ಸರಕಾರ ಹೇರಿದ್ದ ನಿಷೇಧವನ್ನು ಗುಜರಾತ ಹೈಕೋರ್ಟ್ ತೆರವುಗೊಳಿಸಿದೆ. ಪುಸ್ತಕದ ಮೇಲೆ ನಿಷೇಧ ಹೇರುವುದರಿಂದ ಲೇಖಕನ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ವಿರುದ್ದ ಅವಹೇಳನಕಾರಿ ಬರಹಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಜಸ್ವಂತ್ ಸಿಂಗ್ ಅವರು ಪುಸ್ತಕವನ್ನು ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಈ ಪುಸ್ತಕವನ್ನು ಮಾರಾಟ ಮಾಡದಂತೆ ನಿಷೇಧ ಹೇರಿದ್ದರು. ಅದನ್ನು ಪ್ರಶ್ನಿಸಿದ ಜಸ್ವಂತ್ ಸಿಂಗ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.

ಜಸ್ವಂತ್ ಸಿಂಗ್ ಬರೆದಿರುವ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಪುಸ್ತಕದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಖಂಡ ಭಾರತ ವಿಭಜನೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಜೊತೆಗೆ ಪಾಕಿಸ್ತಾನದ ಪಿತಾಮಹ ಮೊಹ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿಸಲಾಗಿದೆ.

ಈ ಬರಹ ಬಿಜೆಪಿ ತತ್ವ ಸಿದ್ಧಾಂತಕ್ಕೆ ವಿರುದ್ದವಾಗಿವೆ ಎಂಬ ಕಾರಣದಿಂದ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಪಟೇಲ್ ಅವರನ್ನು ಅವಹೇಳನ ಮಾಡಲಾಗಿದೆ ಎಂಬ ಕಾರಣ ನೀಡಿದ್ದ ನರೇಂದ್ರ ಮೋದಿ ಪುಸ್ತಕದ ಮೇಲೆ ನಿಷೇಧ ಹೇರಿದ್ದರು. ಗುಜರಾತ್ ಹೈಕೋರ್ಟ್ ನೀಡಿದ ತೀರ್ಪಿನಿಂದ ಸಂತಸಗೊಂಡಿರುವ ಜಸ್ವಂತ್ ಸಿಂಗ್, ಇದು ನನ್ನ ಮೊದಲ ಗೆಲುವು ಎಂದು ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X