ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಆರ್ ನಿಧನ : ಯಡ್ಡಿ ಪ್ರತಿಕ್ರಿಯೆ

By Staff
|
Google Oneindia Kannada News

Yeddyuappa
ಬೆಂಗಳೂರು, ಸೆ. 3 : ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣ ತೀವ್ರ ಆಘಾತ ತಂದಿದೆ ಎಂದು ಚೀನಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಪರಿಷತ್ ನಾಯಕ ವಿಎಸ್ ಉಗ್ರಪ್ಪ ಸಂತಾಪ ಸೂಚಿಸಿದರು.

ರಾಜಶೇಖರರೆಡ್ಡಿ ಧೀಮಂತ ನಾಯಕ. ಆಂಧ್ರಪ್ರದೇಶ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಇವರ ಸಾವು ಅನ್ಯಾಯ. ಮಾತನಾಡಲು ಶಬ್ಧಗಳೆ ಬರುತ್ತಿಲ್ಲ. ವೈಎಸ್ಆರ್ ಮೃತಪಟ್ಟಿದ್ದಾರೆ ಎಂಬ ಸಂಗತಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಸರಳ ಸಜ್ಜನಿಕೆ ವ್ಯಕ್ತಿತ್ವದ ವೈಎಸ್ಆರ್ ಹುಟ್ಟುಹೋರಾಟಗಾರು. ಅವರ ಸಾವು ಅಪಾರ ನಷ್ಟವನ್ನುಂಟು ಮಾಡಿದೆ. ವೈಎಸ್ಆರ್ ನಿಧನದ ಸಲುವಾಗಿ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ಆಚರಿಸಲಾಗುವುದು. ಜೊತೆಗೆ ಶುಕ್ರವಾರ ಸರಕಾರಿ ರಜೆ ಘೋಷಿಸಲಾಗುವುದು ಅವರು ಹೇಳಿದ್ದಾರೆ.

ರಾಜ್ಯಸರಕಾರದ ಪರವಾಗಿ ರೆಡ್ಡಿ ಅವರ ಅಂತ್ಯಕ್ರಿಯೆಗೆ ಗೃಹ ಸಚಿವ ವಿಎಸ್ ಆಚಾರ್ಯ ಮತ್ತು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರ ನಿಯೋಗ ಹೈದರಾಬಾದ್ ಗೆ ಭೇಟಿ ನೀಡಲಿದೆ. ತಾವು ಚೀನಾ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಬಂದ ನಂತರ ಹೈದರಾಬಾದ್ ತೆರೆಳಿ ವೈಎಸ್ ಆರ್ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ವೈಎಸ್ಆರ್ ನಿಧನದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಶೋಕಸಾಗರದಲ್ಲಿ ಮುಳುಗಿದೆ. ತಮ್ಮ ನಾಯಕನ ಅಕಾಲಿಕ ಮರಣದಿಂದ ಅಭಿಮಾನಿಗಳು ಗಲಾಟೆ, ಪ್ರತಿಭಟನೆ ಹಮ್ಮಿಕೊಳ್ಳುವ ಸಾಧ್ಯತೆಗಳಿರುವುದರಿಂದ ಕರ್ನಾಟಕದಿಂದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳುತ್ತಿದ್ದ ಅನೇಕ ಭಕ್ತಾಧಿಗಳು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಹಾಗೂ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಇಂದು ಮತ್ತು ನಾಳೆ ಸರಕಾರಿ ಘೋಷಣೆ ಮಾಡಲಾಗಿದೆ.

* ವಿಡಿಯೋ : ವೈಎಸ್ಆರ್ ಸಾವು ಅಧಿಕೃತ ಪ್ರಕಟ
* ವಿಡಿಯೋ : ವೈಎಸ್ಸಾರ್ ರನ್ನು ಪತ್ತೆ ಹಚ್ಚಿದ ಎನ್ ಆರ್ ಎಸ್ ಎ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X