ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಗಾಮಿ ಮುಖ್ಯಮಂತ್ರಿಯಾಗಿ ರೋಸಯ್ಯ

By Staff
|
Google Oneindia Kannada News

K Rosaiah appointed acting CM of Andhra Pradesh
ಹೈದರಾಬಾದ್, ಸೆ.3: ವೈಎಸ್ ರಾಜಶೇಖರ ರೆಡ್ಡಿ ಅವರ ಹಠಾತ್ ಮರಣದಿಂದ ಆಂಧ್ರಪ್ರದೇಶ ಸರಕಾರಕ್ಕೆ ದಿಕ್ಕು ತೋಚದಂತಾಗಿದೆ. ಮುಂದಿನ ಕಾರ್ಯಗಳ ಬಗ್ಗೆ ಆಂಧ್ರ ಸರಕಾರ ಗಮನ ಹರಿಸಿದೆ. ಹಂಗಾಮಿ ಮುಖ್ಯಮಂತ್ರಿಯಾಗಿ ಹಣಕಾಸು ಸಚಿವ ರೋಸಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಸೂಚಿಸಿದೆ.

ಮುಂದಿನ ಎರಡು ಮೂರು ದಿನಗಳಲ್ಲಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಈ ಮೇರೆಗೆ ಇಂದು ಸಂಜೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಆಂಧ್ರದಲ್ಲಿ ಶೋಕಾಚರಣೆ ಆಚರಿಸಲಾಗುತ್ತಿದ್ದು ಎರಡು ದಿನಗಳ ರಜೆಯನ್ನು ಘೋಷಿಸಲಾಗಿದೆ.

ಕಾಡಿನಲ್ಲಿ ದಾರಿತಪ್ಪಿದ ವರದಿಗಾರರು
ಹೆಲಿಕಾಪ್ಟರ್ ದುರಂತ ಸ್ಥಳವನ್ನು ಪತ್ತೆ ಹಚ್ಚಲು ಹೊರಟ ಕೆಲವರು ನಲ್ಲಮುಲ್ಲ ಕಾಡಿನಲ್ಲಿ ದಾರಿ ತಪ್ಪ್ಪಿದ್ದಾರೆ. ರುದ್ರಕೋಟೆ ಬಳಿಯ ಪಸರುಟ್ರ ಅರಣ್ಯ ಪ್ರದೇಶದಲ್ಲಿ ವರದಿಗಾರರು, ಪೊಲೀಸರು ದಾರಿ ತಪ್ಪಿರುವುದಾಗಿ ಆಂಧ್ರಪ್ರದೇಶದ ಮಾಧ್ಯಮಗಳು ಪ್ರಕಟಿಸಿವೆ.

ಸಚಿವ ಸಂಪುಟ ಸಭೆ ಆರಂಭ
ಹೈದರಾಬಾದ್ ನಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಹಠಾತ್ ಮರಣಾನಂತರ ಪರಿಸ್ಥಿತಿಗಳನ್ನು ಸಮೀಕ್ಷಿಸುತ್ತಿದ್ದು , ಮುಂದಿನ ಕ್ರಮಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಿದ್ದಾರೆ.

ಮಧ್ಯಾಹ್ನಕ್ಕೆ ಪ್ರಧಾನಿ ಆಗಮನ
ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಸೋನಿಯಾಗಾಂಧಿ ಸಹ ಇಂದು ಮಧ್ಯಾಹ್ನ ಮೂರು ಗಂಟೆಗೆ ಹೈದರಾಬಾದ್ ಗೆ ಆಗಮಿಸಲಿದ್ದಾರೆ. ಶೋಕಾಚರಣೆ ನಿಮಿತ್ತ ತಮಿಳುನಾಡು ಮತ್ತು ಪಾಂಡಿಚೇರಿ ಸರಕಾರಗಳು ಸೆಪ್ಟೆಂಬರ್ 4ರಂದು ರಜೆ ಘೋಷಿಸಿವೆ.

ವೈಎಸ್ಆರ್ ಮೃತ ದೇಹ ಕರ್ನೂಲಿಗೆ
ಹೆಲಿಕಾಪ್ಟರ್ ದುರಂತದಲ್ಲಿ ಸಾವಪ್ಪಿದ ವೈ ಎಸ್ ರಾಜಶೇಖರ ರೆಡ್ಡಿ ಮೃತ ದೇಹವನ್ನು ಕರ್ನೂಲಿಗೆ ಸ್ಥಳಾಂತರಿಸುವ ಪ್ರಯತ್ನಗಳು ಚುರುಕುಗೊಂಡಿವೆ. ಅವಶ್ಯಕ ಸಾಮಗ್ರಿಯೊಂದಿಗೆ ಎರಡು ಹೆಲಿಕಾಪ್ಟರ್ ಗಳು ಕರ್ನೂಲಿನಿಂದ ಘಟನಾ ಸ್ಥಳಕ್ಕೆ ಹೊರಟಿವೆ. ಈ ದುರಂತದಲ್ಲಿ ವೈಎಸ್ಆರ್ ಅವರೊಂದಿಗೆ ಅವರ ಮುಖ್ಯ ಕಾರ್ಯದರ್ಶಿ ಸುಬ್ರಹ್ಮಣ್ಯಂ, ಭದ್ರತಾಧಿಕಾರಿ ವೆಸ್ಲಿ ಮತ್ತು ಇಬ್ಬರು ಪೈಲಟ್ ಗಳು ಸಹ ಮೃತಪಟ್ಟಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X