ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ಕೊನೆಗೆ ಆರ್ಥಿಕ ಕುಸಿತ ಮಾಯ : ಪಿಎಂ

By Staff
|
Google Oneindia Kannada News

Manmohan Singh
ನವದೆಹಲಿ, ಸೆ. 1 : ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಉಂಟಾಗಿದ್ದ ಆರ್ಥಿಕ ಕುಸಿತ ಭಾರತ ವಿವಿಧ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರಿತ್ತು. ಆರ್ಥಿಕ ಕುಸಿತ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ್ದು, ಇದೇ ವರ್ಷದ ಕೊನೆಯಲ್ಲಿ ಯಥಾ ಸ್ಥಿತಿಗೆ ಬರಲಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಆಶಾವಾದ ವ್ಯಕ್ತಪಡಿಸಿದರು.

ಯೋಜನಾ ಆಯೋಗದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಆರ್ಥಿಕ ಕ್ಷೇತ್ರಕ್ಕೆ ಈ ವರ್ಷ ಅತ್ಯಂತ ಕಠಿಣ ಸಮಯ ಎಂದರು. ಆರ್ಥಿಕ ಕುಸಿತದ ಜೊತೆಗೆ ದೇಶದ ಎದುರು ಇನ್ನೊಂದು ಗಂಭೀರ ಸಮಸ್ಯೆ ಎದುರಿಸತೊಡಗಿದೆ. ಈ ವರ್ಷದಲ್ಲಿ ಮುಂಗಾರಮಳೆ ಗಮನಾರ್ಹ ಮಟ್ಟದಲ್ಲಿ ಕ್ಷೀಣಿಸಿರುವುದು ಕಳವಳದ ಸಂಗತಿ. ಇದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಯೋಜನಾ ಆಯೋಗದ ಮೂಲಕ ಅನೇಕ ಯೋಜನೆಗಳನ್ನು ಘೋಷಣೆ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಮನಮೋಹನ್ ಸಿಂಗ್ ಹೇಳಿದರು.

ಯೋಜನಾ ಆಯೋಗದ ಉನ್ನತ ಸಭೆಯಲ್ಲಿ ಹಣಕಾಸು ಸತಿವ ಪ್ರಣಬ್ ಮುಖರ್ಜಿ, ಕೃಷಿ ಸಚಿವ ಶರದ್ ಪವಾರ್, ಗೃಹ ಸಚಿವ ಪಿ ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತಿತರು ಉಪಸ್ಥಿತರಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X