ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ : ಎರಡು ದಿನಗಳ ಪ್ರಾಂತೀಯ ಬೈಠಕ್

By Staff
|
Google Oneindia Kannada News

Yeddyurappa
ದಾವಣಗೆರೆ, ಆ. 29 : ರಾಷ್ಟ್ರೀಯ ಭಾರತೀಯ ಜನತಾ ಪಕ್ಷದಲ್ಲಿ ಎದ್ದಿರುವ ಆಂತರಿಕ ಬಿರುಗಾಳಿ ಹಿನ್ನೆಲೆಯಲ್ಲಿ ರಾಜ್ಯ ಘಟಕದಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಪ್ರಾಂತೀಯ ಆರ್ಎಸ್ಎಸ್ ನಾಯಕರು ಮತ್ತು ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಬೈಠಕ್ ಆರಭಿಸಿದ್ದಾರೆ.

ರಾಷ್ಟ್ರ ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತ ಶೀಘ್ರದಲ್ಲಿ ಕೊನೆಗೊಳ್ಳಲಿದೆ. ಕಳೆದ ಲೋಕಸಭೆಯಲ್ಲಿ ಪಕ್ಷ ಸೋತಿರುವುದರಿಂದ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದೆ. ಈಗಾಗಲೇ ಪರಿವಾರದ ನಾಯಕರು ಮದ್ಯೆ ಪ್ರವೇಶಿಸಿದ್ದು, ಇದಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದರು. ದಾವಣಗೆರೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ಪ್ರಾಂತೀಯ ಬೈಠಕ್ ನಲ್ಲಿ ರಾಜಕೀಯ ಬಗ್ಗೆ ಚರ್ಚೆ ನಡೆಸುವುದಿಲ್ಲ. ಮುಖ್ಯವಾಗಿ ರಾಜ್ಯ ಘಟಕದಲ್ಲಿ ಮತ್ತಷ್ಟು ಶಿಸ್ತು ಕಾಯ್ದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು. ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ಮತ್ತು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಬಹಿರಂಗ ಕಚ್ಚಾಟದ ಬಗ್ಗೆಯೂ ಬೈಠಕ್ ನಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ರಾಷ್ಟ್ರೀಯ ಬಿಜೆಪಿಯಲ್ಲಿ ಎದ್ದಿರುವ ಸುನಾಮಿ ದಿನದಿಂದ ದಿನಕ್ಕೆ ದಟ್ಟವಾಗತೊಡಗಿದೆ. ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿ ಗಳಿಸಿದ್ದ ಐದು ದಶಕಗಳ ರಾಜಕೀಯ ಪ್ರತಿಷ್ಠೆಯನ್ನು ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಮನೇಕಾ ಗಾಂಧಿ ದನಿಗೂಡಿಸಿರುವುದು ಬಿಕ್ಕಟ್ಟು ಕಗ್ಗಂಟಾಗುತ್ತಾ ಸಾಗಿದೆ.

ಬಿಜೆಪಿ ಇದು ಅತ್ಯಂತ ಕ್ಲಿಷ್ಟಕರ ಸಮಯ, ಇಂತಹ ಕಠಿಣ ಸಂದರ್ಭದಲ್ಲಿ ಎನ್ ಡಿಎ ಸರಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಬ್ರಜೇಶ್ ಮಿಶ್ರಾ ಕೂಡಾ ಅಡ್ವಾಣಿ ಮೇಲೆ ಬಾಂಬ್ ಎಸೆದಿದ್ದು ಬೆಂಕಿಗೆ ತುಪ್ಪ ಸುರಿವಿದ ಹಾಗಾಗಿದೆ. ಔಟ್ ಲುಕ್ ಗೆ ನೀಡಿದ ಸಂದರ್ಶನದಲ್ಲಿ ಜಸ್ವಂತ್ ಸಿಂಗ್, ಅಡ್ವಾಣಿ ಮೇಲೆ ಭಾರಿ ದಾಳಿ ನಡೆಸಿದ್ದಾರೆ. ಅಡ್ವಾಣಿ ದೇಶ ರಾಜಕೀಯ ಮಾಡಲು ನಾಲಾಯಕ್ ಎಂಬ ಮಾತುಗಳನ್ನು ಆಡಿರುವುದು ಬಿಜೆಪಿ ಇಮೇಜಿಗೆ ಬಲವಾದ ಏಟನ್ನು ಅವರು ನೀಡಿದ್ದಾರೆ.

ಇನ್ನೊಂದಡೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಜೆಪಿ ಯುವಮುಖಂಡರ ಅವಕಶ್ಯಕತೆ ಇದೆ ಎಂದು ಫರ್ಮಾನು ಹೊರಡಿಸಿದ್ದು, ಶೀಘ್ರದಲ್ಲಿ ಅಡ್ವಾಣಿ ತಮ್ಮ ಸ್ಥಾನ ಖಾಲಿ ಮಾಡುವ ಸೂಚನೆಗಳಂತೂ ಕಂಡಬಂದಿವೆ. ಇಂದು ಸುಷ್ಮಾ ಸ್ವರಾಜ್, ಅರುಣ್ ಜೈಟ್ಲಿ, ಅನಂತಕುಮಾರ್, ವೆಂಕಯ್ಯ ನಾಯ್ಡು ಅವರು ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅರುಣ್ ಜೈಟ್ಲಿ ಬಿಜೆಪಿ ದಂಡನಾಯಕನಾಗುವ ಲಕ್ಷಣಗಳ ಇವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X