ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಬರ್ಟಿ ಪ್ರತಿಮೆ ಮಾದರಿಯಲ್ಲಿ ಶಿವಾಜಿ ಪ್ರತಿಮೆ

By Staff
|
Google Oneindia Kannada News

ಮುಂಬೈ, ಆ. 27 : ತೀವ್ರ ಬರದ ನಡುವೆಯೂ ಮಹಾರಾಷ್ಟ್ರ ಸರಕಾರ ಛತ್ರಪತಿ ಶಿವಾಜಿಯ 300 ಅಡಿ ಉದ್ದದ ಡಿಜಿಟಲ್ ಪ್ರತಿಮೆ ಅನಾವರಣ ಮಾಡಲು ತಯಾರಿ ನಡೆಸಿದೆ. ಈ ಪ್ರತಿಮೆಗೆ ತಗಲುವ ಖರ್ಚು 350 ಕೋಟಿ ರೂಪಾಯಿ. ಕಳೆದ ಮೂರು ವಾರದಲ್ಲಿ 157 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆ೦ದು ಘೋಷಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿತ್ತು ಮತ್ತು ಈ ತಾಲೂಕುಗಳಲ್ಲಿ ಸುಮಾರು ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದರಲ್ಲದೇ 40 ರೈತರು ತೀವ್ರ ಬರ ಎದುರಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನ್ಯೂಯಾರ್ಕ್ ನಲ್ಲಿರುವ 'ಲಿಬರ್ಟಿ ಪ್ರತಿಮೆ' ಗೆ ಪೈಪೋಟಿ ನೀಡುವಂತೆ ಅನಾವರಣಗೊಳ್ಳಲಿರುವ ಈ ಪ್ರತಿಮೆ ಮುಂಬೈ ಹೊರವಲಯದ ಅರಬ್ಬೀ ಸಮುದ್ರದ ಕಿನಾರೆ ಬಳಿ ಕೃತಕ ದ್ವೀಪ ನಿರ್ಮಿಸಿ ಅನಾವರಣ ಮಾಡಲಾಗುವುದೆಂದು ಮತ್ತು ಅಲ್ಲಿ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯ ಕೂಡ ನಿರ್ಮಿಸಲಾಗುವುದೆಂದು ಸರಕಾರದ ಪ್ರಕಟಣೆಯನ್ನು ಆಧರಿಸಿ ಮರಾಠಿ ದಿನಪತ್ರಿಕೆ 'ಲೋಕಸತ್ತಾ' ವರದಿ ಮಾಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X