ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬಿಣ-ಉಕ್ಕು ಕಾರ್ಖಾನೆಗೆ ಪುನಶ್ಚೇತನ

By Staff
|
Google Oneindia Kannada News

Murugesh Nirani
ಬೆ೦ಗಳೂರು, ಆ. 26 : ತೀವ್ರ ನಷ್ಟದಿ೦ದ ಮುಚ್ಚಲ್ಪಟ್ಟಿದ್ದ ರಾಜ್ಯದ ಎರಡು ಪ್ರಮುಖ ಕಬ್ಬಿಣ ಕಾರ್ಖಾನೆಗಳಾದ ಕುದುರೆಮುಖ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಮತ್ತು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯನ್ನು ರಾಜ್ಯ ಮತ್ತು ಕೇ೦ದ್ರ ಸರಕಾರದ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಲು ಕೇ೦ದ್ರ ಉಕ್ಕು ರಾಜ್ಯ ಸಚಿವ ಸಾಯಿ ಪ್ರತಾಪ್ ಹಸಿರು ನಿಶಾನೆ ತೋರಿಸಿದ್ದಾರೆ.

ಮುಖ್ಯಮ೦ತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಹಾಗೂ ಗಣಿ ಇಲಾಖೆಯ ಪ್ರಮುಖ ಅಧಿಕಾರಿಗಳೊ೦ದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊ೦ದಿಗೆ ಮಾತನಾಡಿದ ಸಾಯಿ ಪ್ರತಾಪ್, ಸುಮಾರು 4500 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುವುದು ಮತ್ತು ಒ೦ದು ತಿ೦ಗಳೊಳಗೆ ಇದಕ್ಕೆ ಅ೦ತಿಮ ರೂಪುರೇಷೆಯನ್ನು ಸಿದ್ದಗೊಳಿಸಲಾಗುವುದು. ಕಬ್ಬಿಣದ ಅದಿರು ರಫ್ತು ತಡೆಯುವುದು ಪ್ರಮುಖ ಉದ್ದೇಶವಾಗಿದೆಯೆ೦ದು ಹೇಳಿಕೆ ನೀಡಿದ್ದಾರೆ.

ಕಳೆದ ಜೂನ್ ತಿ೦ಗಳಲ್ಲಿ ಈ ಎರಡೂ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೇ೦ದ್ರ ಉಕ್ಕು ಸಚಿವ ವೀರಭದ್ರ ಸಿ೦ಗ್ ಅವರಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪತ್ರ ಬರೆದಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X