ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.29 ಕ್ಕೆ ಇನ್ಫಿ ಮೂರ್ತಿ ಮಗಳು ಮದುವೆ

By Staff
|
Google Oneindia Kannada News

Akshata Narayana Murthy
ಬೆಂಗಳೂರು, ಆ. 26 : ಇನ್ಫೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಇದೇ 29 ರಂದು ಸಪ್ತಪದಿ ತುಳಿಯಲಿದ್ದಾರೆ. ಸ್ಟ್ಯಾನ್ ಫೋರ್ಡ್ ಬಿಸಿನೆಸ್ ಸ್ಕೂಲ್ ನ ತನ್ನ ಸಹಪಾಠಿ ರಿಷಿ ಸುಮುಖ್ ಅವರನ್ನು ಅಕ್ಷತಾ ಕೈಹಿಡಿಯಲಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿರುವ ಕ್ಲಿನ್ ಟೆಕ್ ಸ್ಪೇಸ್ ಸಂಸ್ಥೆಯಲ್ಲಿ ಹೂಡಿಕೆ ಸಲಹೆಗಾರರಾಗಿರುವ 29ರ ಹರೆಯದ ಅಕ್ಷತಾ ಭಾರತೀಯ ಮೂಲಕ ರಿಷಿ ಸುಮುಖ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮದುವೆ ಕಾರ್ಯಕ್ರಮ ಎರಡು ದಿನ ನಡೆಯಲಿದೆ. ಆಗಸ್ಟ್ 29 ರಂದು ಮದುವೆ ನಡೆಯಲಿದ್ದು, ಮಾರನೇ ದಿನ ನಗರದ ಹೋಟೆಲ್ ಲೀಲಾ ಪ್ಯಾಲೇಸ್ ನಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ದೇಶದ ಸುಮಾರು ಒಂದು ಸಾವಿರ ವಿಐಪಿಗಳು ಔತಣಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X