ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಲ್ಲಿ ಮತ್ತೊಂದು ಬಲಿಗೆ ವೇದಿಕೆ ಸಜ್ಜು

By Staff
|
Google Oneindia Kannada News

Arun Shourie
ನವದೆಹಲಿ, ಆ. 26 : ಜಸ್ವಂತ್ ಸಿಂಗ್ ಅವರನ್ನು ಶಿಸ್ತಿನ ಉಲ್ಲಂಘನೆಗಾಗಿ ನೋಟಿಸ್ ನೀಡದೇ ಉಚ್ಚಾಟಿಸಿದ್ದ ಬಿಜೆಪಿ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದು, ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಅರುಣ್ ಶೌರಿಗೆ ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆಯ ಕುರಿತು ವಿವರಣೆ ಬಯಸಿ ನೋಟಿಸ್ ನೀಡಿದೆ.

ವಾಸ್ತವವಾಗಿ ಜಸ್ವಂತ್ ಸಿಂಗ್ ಗಿಂತ ಹೆಚ್ಚು ತೀಕ್ಷ್ಣವಾಗಿ ಪಕ್ಷದ ಲೋಕಸಭಾ ಚುನಾವಣೆಯ ವೈಫಲ್ಯವನ್ನು ಎತ್ತಿ ಹಿಡಿದಿದ್ದ ಶೌರಿ, ಸೋಲಿಗೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಹೊಣೆಯೆಂದು ಆರೋಪಿಸಿ ಆರ್ ಎಸ್ ಎಸ್ ಪಕ್ಷದ ಹಿಡಿತ ತೆಗೆದುಕೊಳ್ಳಬೇಕು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.

ಬಿಜೆಪಿಯ ಆಂತರಿಕ ವಿಚಾರಗಳಲ್ಲಿ ಆರ್ ಎಸ್ ಎಸ್ ಮೂಗು ತೂರಿಸುವುದಿಲ್ಲ. ಪಕ್ಷವನ್ನು ನಿಯಂತ್ರಿಸುವುದು ನಮ್ಮ ಕೆಲಸವಲ್ಲ. ನಾವು ಬರೀ ಸಹಾಯ ಮತ್ತು ಸಲಹೆ ನೀಡುತ್ತೇವೆ ಎಂದು ಆರ್ಎಸ್ಎಸ್ ವಕ್ತಾರ ರಾಮ್ ಮಾಧವ್ ಹೇಳಿಕೆ ನೀಡುವ ಮೂಲಕ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಈ ಮಧ್ಯೆ ರಾಜಸ್ಥಾನದಲ್ಲಿ ಪ್ರತಿಪಕ್ಷದ ನಾಯಕಿಯಾಗಿರುವ ವಸುಂಧರಾ ರಾಜೆ ಅವರಿಗೆ ಇನ್ನು ಮೂರು ದಿನಗಳಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡುವಂತೆ ಬಿಜೆಪಿ ಸೂಚನೆ ನೀಡಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ರಾಜೀನಾಮೆ ನೀಡಿದ ನಂತರ ಪಕ್ಷದಲ್ಲಿ ಒಳ್ಳೆಯ ಹುದ್ದೆ ಕೊಡಬೇಕು, ತನ್ನ ಇಬ್ಬರು ಬೆಂಬಲಿಗ ಶಾಸಕರ ಮೇಲಿನ ಅಮಾನತು ರದ್ದುಪಡಿಸಬೇಕು ಮತ್ತು ತಾವು ಸೂಚಿಸಿದವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡಬೇಕೆನ್ನುವ ವಸುಂಧರಾ ಬೇಡಿಕೆಗೆ ರಾಜನಾಥ್ ಸಿಂಗ್ ಮೊದಲು ರಾಜೀನಾಮೆ ನೀಡಿದರೆ ಮಾತ್ರ ಬೇಡಿಕೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X