ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಣ್ಣ ಸಚಿವರಾಗಿ ಮುಂದುವರೆಯಬೇಕೆ?

By Staff
|
Google Oneindia Kannada News

Why should V Somanna continue as a minister?
ಬೆಂಗಳೂರು, ಆ. 24 : ಗೋವಿಂದರಾಜನಗರ ಉಪಚುನಾವಣೆಯಲ್ಲಿ ಸೋಲನುಭಸಿದ ಮುಜರಾಯಿ ಖಾತೆ ಸಚಿವ ವಿ ಸೋಮಣ್ಣ ಸಚಿವರಾಗಿ ಮುಂದುವರೆಯಬೇಕೆ? ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುವಿನ ತೀರ್ಪು ಅಂತಿಮ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಹಾಗಾದರೆ, ಸಚಿವ ಸೋಮಣ್ಣ ಸಚಿವರಾಗಿ ಮುಂದುವರೆಯುವುದು ಎಷ್ಟು ಸರಿ? ಜನರಿಂದ ತಿರಸ್ಕೃತಗೊಂಡಿರುವ ಒಬ್ಬ ನಾಯಕ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಇರುತ್ತದೆಯೇ?

ಆದರೆ, ಮುಂಬರುವ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಸೋಮಣ್ಣ ಅವರನ್ನು ಸಚಿವರಾಗಿ ಮುಂದುವರೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ. ಹಾಗಾದರೆ, ಮತದಾರನ ತೀರ್ಪಿಗೆ ಬೆಲೆ ಇಲ್ಲವೇ? ವಿಧಾನ ಮಂಡಲದ ಸದಸ್ಯರಾಗದ ಸೋಮಣ್ಣ ಅವರು ಸಂಪುಟದಲ್ಲಿ ಹೇಗೆ ಮುಂದವರಿಯಬೇಕು ಎಂಬುದು ಈಗಿನ ಸವಾಲು.

ಯಾರೇ ಸಚಿವರಾಗಲು ವಿಧಾನಮಂಡಲದ ಸದಸ್ಯರಾಗಬೇಕು. ಸೋಮಣ್ಣ ಸಚಿವರಾಗಿ ಡಿಸೆಂಬರ್ 6ಕ್ಕೆ ಆರು ತಿಂಗಳ ಕಳೆಯಲಿದೆ. ಅಷ್ಟರೊಳಗೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಲು ಬಿಜೆಪಿ ವಲಯದಲ್ಲಿ ಭಾರಿ ಚಿಂತನೆ ನಡೆದಿದೆ. ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಐವರು ಸದಸ್ಯರ ಅವಧಿ ಪೂರ್ಣಗೊಳ್ಳಲು ಇನ್ನು 11 ತಿಂಗಳು ಬಾಕಿ ಇದೆ. ಅವರಲ್ಲಿ ಒಬ್ಬರ ಮನವೊಲಿಸಿ ರಾಜೀನಾಮೆ ಕೊಡಿಸುವುದು. ಆ ಸ್ಥಾನಕ್ಕೆ ಸೋಮಣ್ಣ ಅವರನ್ನು ನಾಮಕರಣ ಮಾಡುವುದು. ಇದಕ್ಕೆ ತ್ಯಾಗ ಮಾಡಿದ ಸದಸ್ಯರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವುದು ಯಡಿಯೂರಪ್ಪ ಅವರ ಚಿಂತನೆಯಾಗಿದೆ. ಒಟ್ಟಿನಲ್ಲಿ ಜನರಿಂದ ತಿರಸ್ಕೃತಗೊಂಡಿರುವ ನಾಯಕರೊಬ್ಬರು ಸಚಿವರಾಗಿ ಮುಂದುವರೆಯುವುದು ಸ್ಪಷ್ಟವಾಗಿದೆ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X