ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಗಲಭೆಯಿಂದ ಅಟಲ್ ಘಾಸಿ : ಜಸ್ವಂತ್

By Staff
|
Google Oneindia Kannada News

Jaswant Singh
ಬೆಂಗಳೂರು, ಆ. 24 : ಮೊಹಮ್ಮದ್ ಅಲಿ ಜಿನ್ನಾರನ್ನು ಹೊಗಳಿ ಬರೆದಿರುವ ಪುಸ್ತಕದಿಂದಾಗಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಜಸ್ವಂತ್ ಸಿಂಗ್ ದಿನಕ್ಕೊಂದರಂತೆ ಬಿಜೆಪಿಯ ಆಂತರಿಕ ವಿಷಯಗಳನ್ನು ಹೊರಗೆಡವುತ್ತಿದ್ದಾರೆ. ಗುಜರಾತ್ ಗಲಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಆಗಿನ ಪ್ರಧಾನಿ ಅಟಲ್ ಬಿಹಾರಿ ಅವರನ್ನು ಅಡ್ವಾಣಿಯವರೇ ತಡೆದಿದ್ದರು ಎಂದು ಜಸ್ವಂತ್ ಸಿಂಗ್ ಹೇಳಿರುವುದು ಭಾರಿ ಗೊಂದಲಕ್ಕೆ ಕಾರಣವಾಗಿದೆ.

2002ರ ಗುಜರಾತ್ ಗಲಭೆ ವಾಜಪೇಯಿ ಅವರನ್ನು ಬಹುವಾಗಿ ಕಲಕಿತ್ತು. ಸಂಸತ್ತು ಅಧಿವೇಶನ ನಡೆಯುತ್ತಿರುವಾಗಲೇ ತಮ್ಮ ಸಂಸದೀಯ ಕಚೇರಿಯಲ್ಲಿ ಕುಳಿತಿದ್ದ ವಾಜಪೇಯಿ, ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಸಿಂಗ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕಾಗದವನ್ನು ತೆಗೆದುಕೊಂಡ ವಾಜಪೇಯಿ ತಮ್ಮ ಕೈಯಾರೆ ರಾಜೀನಾಮೆ ಬರೆಯತೊಡಗಿದರು. ನಾನವರ ಕೈಗಳನ್ನು ಹಿಡಿದುಕೊಂಡಾಗ ನನ್ನತ್ತ ನೋಟ ಬೀರಿದರು. ಇದೇನು ಮಾಡುತ್ತಿದ್ದೀರಿ? ಬೇಡ ಎಂದು ನಾನು ಹೇಳಿದೆ. ಅವರು ಬಿಟ್ಟುಬಿಡಿ ಎಂದರಾದರೂ ಅವರ ಮನವೊಲಿಸಲು ನಾನು ಸಫಲನಾದೆ. ನಂತರ ಅವರ ನಿವಾಸಕ್ಕೆ ತೆರಳಿದ ನಾವು ಅತಂಕವನ್ನು ಕಡಿಮೆ ಮಾಡುವಲ್ಲಿ ಯಶ ಕಂಡೆವು ಎಂದು ಜಸ್ವಂತ್ ಸಿಂಗ್ ವಿವರಿಸಿದ್ದಾರೆ.

ಬಿಜೆಪಿ ಎಂಬುದು ಒಂದು ತೆರೆದ ಅಂಗಳ. ಪ್ರತಿದಿನವೂ ಇಲ್ಲೊಂದು ಸಿದ್ಧಾಂತದ ಫುಟ್ ಬಾಲ್ ನೀಡಲಾಗುತ್ತದೆ. ಎಲ್ಲ ಸದಸ್ಯರೂ ಇದಕ್ಕೆ ಮನಸಿಗೆ ಬಂದಂತೆ ಒದೆಯಬಹುದು. ಏಕೆಂದರೆ ಇಲ್ಲಿ ಗೋಲು ಪಂಜರವೇ ಇಲ್ಲ, ಹೀಗೆಂದು ಜಸ್ವಂತ್ ಸಿಂಗ್ ಅವರು ಉಚ್ಚಾಟನೆಗೊಳ್ಳುವುದಕ್ಕೂ ಮೊದಲು ಪಕ್ಷಕ್ಕೆ ಬರೆದಿದ್ದ ಪತ್ರದಲ್ಲಿ ಟೀಕಿಸಿದ್ದು, ಈಗ ಬಹಿರಂಗವಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X