ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಭಂಟ ರಾಜುಗೆ ಗೆಲುವಿನ ಕನಸು

By Staff
|
Google Oneindia Kannada News

K Raju
ಬೆಂಗಳೂರು, ಆ.21:ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಿಗೆ ಆ.18 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, 71 ಜನ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕಿಯೆ ಆರಂಭವಾಗಿದೆ. ಆರಂಭಿಕ ಹಿನ್ನೆಡೆ ಪಡೆದಿದ್ದ ಬಿಜೆಪಿ ಇತ್ತೀಚಿನ ವರದಿಯಂತೆ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಒಟ್ಟು 15 ಹಂತದ ಮತ ಎಣಿಕೆ ಕಾರ್ಯ ನಡೆಯಲಿದ್ದು. ಸಮಯ 9.45 ರ ಮತ ಎಣಿಕೆಯಂತೆ ಅಭ್ಯರ್ಥಿಗಳ ಸ್ಥಿತಿ ಗತಿ ಹೀಗಿದೆ:
ರಾಮನಗರದಲ್ಲಿ ಮೂರು ಹಂತದ ಎಣಿಕೆ ಮುಗಿದಿದ್ದು, ಜೆಡಿಎಸ್ ನ ಕೆ.ರಾಜು ಅವರು ಕಾಂಗ್ರೆಸ್ಸಿನ ಸಿಎಂ ಲಿಂಗಪ್ಪ ಅವರಿಗಿಂತ 8066 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಉಳಿದಂತೆ ಚಿತ್ತಾಪುರದಲ್ಲಿ 4ನೇ ಸುತ್ತಿನ ಮತಎಣಿಕೆ ನಂತರ ಪ್ರಿಯಾಂಕಾ ಖರ್ಗೆ ಅವರು ಬಿಜೆಪಿಯ ವಾಲ್ಮೀಕಿ ನಾಯಕ ಅವರಿಗಿಂತ 1174ಮತಗಳಿಂದ ಮುಂದಿದ್ದರು. ಆದರೆ, ಕುತೂಹಲ ತಿರುವು ಪಡೆದು ಕೊಂಡು 8ನೇಸುತ್ತಿನ ಎಣಿಕೆಗೂ ಮುನ್ನ ವಾಲ್ಮೀಕಿ ನಾಯಕ್ 366 ಮತಗಳಿಂದ ಮುನ್ನಡೆ ಪಡೆದಿದ್ದಾರೆ.

ಗೋವಿಂದರಾಜನಗರದಲ್ಲಿ ಕಾಂಗ್ರೆಸ್ ನ ಪ್ರಿಯಾಕೃಷ್ಣ ಅವರು ಬಿಜೆಪಿ ವಿ ಸೋಮಣ್ಣ ಅವರಿಗಿಂತ 979ಮತಗಳಿಂದ ಮುಂದಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿಯ ಸಿಪಿ ಯೋಗಿಶ್ವರ್ ಅವರಿಗಿಂತ ಜೆಡಿಎಸ್ ನ ಎಂ ಅಶ್ವಥ್ ಅವರು7000 ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಕೊಳ್ಳೇಗಾಲದಲ್ಲಿ ಮಾತ್ರ ಬಿಜೆಪಿ ಮುನ್ನಡೆ ಸಾಧಿಸಿದ್ದು, ಜಿಎನ್ ನಂಜುಂಡಸ್ವಾಮಿ ಅವರು ಕಾಂಗ್ರೆಸ್ಸಿನ ಜಯಣ್ಣ ಅವರಿಗಿಂತ 2520 ಮತಗಳಿಂದ ಮುಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X