ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ತೆಕ್ಕೆಗೆ ಚನ್ನಪಟ್ಟಣ, ರಾಮನಗರ

By Staff
|
Google Oneindia Kannada News

ಬೆಂಗಳೂರು, ಆ.21: ಚಿತ್ತಾಪುರದಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ್ ಗೆಲುವಿನ ರಾಮಾಯಣ ಬರೆದಿದ್ದಾರೆ. ಅವರು 1606 ಮತಗಳ ಅಂತರದಿಂದ ಪ್ರಿಯಾಂಕ ಖರ್ಗೆ(ಕಾಂಗ್ರೆಸ್) ವಿರುದ್ಧ ಗೆಲುವು ಸಾಧಿಸಿದ್ದಾರೆ. ವಾಲ್ಮೀಕಿ ನಾಯಕ್ ಕಾಂಗ್ರೆಸ್ ನ ಭದ್ರಕೋಟೆಯನ್ನು ಛಿದ್ರ ಛಿದ್ರ ಮಾಡಿ ಗೆಲುವಿನ ನಗೆ ಬೀರಿದ್ದಾರೆ.

ವಾಲ್ಮೀಕಿ ನಾಯಕ್ ಗೆಲ್ಲುವ ಮೂಲಕ ಉಪಚುನಾವಣೆಯಲ್ಲಿ ಬಿಜೆಪಿ ಮೊದಲ ಗೆಲುವನ್ನು ದಾಖಲಿಸಿದೆ. ಈ ಹಿಂದೆ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ವಾಲ್ಮೀಕಿ ನಾಯಕ್ ಸೋತಿದ್ದರು. ಇದೀಗ ಚಿತ್ತಾಪುರ ಮತದಾರರ ಚಿತ್ತವನ್ನು ಗೆದ್ದಿದ್ದಾರೆ.

ಆರಂಭದಲ್ಲಿ ಪ್ರಿಯಾಂಕ ಖರ್ಗೆ (ಕಾಂಗ್ರೆಸ್) ಮುನ್ನಡೆ ಸಾಧಿಸಿದ್ದರು. ನಂತರ ವಾಲ್ಮೀಕಿ ನಾಯಕ್ ಮುನ್ನಡೆ ಸಾಧಿಸಿ ಚಿತ್ತಾಪುರ ಕ್ಷೇತ್ರ ರೋಚಕ ತಿರುವನ್ನು ಪಡೆಯಿತು. ಪ್ರಿಯಾಂಕ ಖರ್ಗೆ ಮತ್ತು ವಾಲ್ಮೀಕಿ ನಾಯಕ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು.

ಜೆಡಿಎಸ್ ತೆಕ್ಕೆಗೆ ಚನ್ನಪಟ್ಟಣ,ರಾಮನಗರ
ಜೆಡಿಎಸ್ ನ ಎಂಸಿ ಅಶ್ವಥ್ 2120 ಮತಗಳ ಅಂತರದಿಂದ ಬಿಜೆಪಿಯ ಪ್ರಬಲ ಸ್ಪರ್ಧಿ ಸಿ ಪಿ ಯೋಗೇಶ್ವರ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ.

ರಾಮನಗರದಲ್ಲಿ ಕೆ ರಾಜು 20284 ಮತಗಳ ಅಂತರದಿಂದ ಸಿ ಎಂ ಲಿಂಗಪ್ಪ (ಕಾಂಗ್ರೆಸ್) ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದು ಜೆಡಿಎಸ್ ನ ಪ್ರತಿಷ್ಠಿತ ಕಣವಾಗಿತ್ತು. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಮತದಾರರ ಮನಗೆದ್ದಿದ್ದಾರೆ.

ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಇಲ್ಲಾ ಅಂದರೆ ನಮಗೊಂದಿಷ್ಟು ವಿಷಕೊಡಿ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ರಾಮನಗರ ಮತ್ತು ಚನ್ನಪಟ್ಟಣದ ಮತದಾರರು ಜೆಡಿಎಸ್ ಗೆ ಅಮೃತವನ್ನು ಕೊಟ್ಟಿದ್ದಾರೆ.

ಬಿಜೆಪಿ ತೆಕ್ಕೆಗೆ ಕೊಳ್ಳೇಗಾಲ
ಬಿಜೆಪಿ ಅಭ್ಯರ್ಥಿ ನಂಜುಂಡಸ್ವಾಮಿ ಗೆಲುವು ಸಾಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಬಿಜಿಪಿಗೆ ಗೆಲುವು ದೂರವಾಗಿತ್ತು. ಉಪಚುನಾವಣೆಯಲ್ಲಿ ನಂಜುಂಡಸ್ವಾಮಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಕನಸು ನೆರೆವೇರಿದೆ. ಆರಂಭದಿಂದಲೂ ಬಿಜೆಯ ಪ್ರಚಾರ ಕಾರ್ಯದಲ್ಲಿ ಸಾಕಷ್ಟು ಶ್ರಮ ವಹಿಸಿತ್ತು. ಹಾಗಾಗಿ ಕೊಳ್ಳೇಗಾಲ ಬಿಜೆಪಿಯ ವಶವಾಗಿದೆ. ಮತಗಳ ಅಂತರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X