ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಗೆ ಒಂದು ರೇಖಾಚಿತ್ರ ಬರೆದು ಕೊಡಿ

By Staff
|
Google Oneindia Kannada News

Doodle contest for kids
ಬೆಂಗಳೂರು, ಆ.21: ಭಾರತದ ಶಾಲಾ ಮಕ್ಕಳಿಗೆ ಸೃಜನಶೀಲ ಸ್ಪರ್ಧೆಯನ್ನು ಗೂಗಲ್ ಸಂಸ್ಥೆ ಆಯೋಜಿಸಿದೆ. ಗೂಗಲ್ ಚಿನ್ಹೆಗೆ ಹೊಂದುವ ರೇಖಾಚಿತ್ರ ಬಿಡಿಸಿ, ಗೂಗಲ್ ಮುಖಪುಟದಲ್ಲಿ ನಿಮ್ಮ ಕಲೆಯ ಬೆಲೆಯನ್ನು ಕಾಣಬಹುದಾಗಿದೆ. ಆಯ್ದ ರೇಖಾಚಿತ್ರ(doodle)ವನ್ನು ಮಕ್ಕಳ ದಿನಾಚರಣೆಯ ದಿನದಂದು ಬಳಸಲಾಗುವುದು ಎಂದು ಗೂಗಲ್ ನ ರೇಖಾಚಿತ್ರವಿನ್ಯಾಸಕಾರ ಡೆನ್ನಿಸ್ ಹ್ವಾಂಗ್ ತಿಳಿಸಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಡೂಡ್ಲ್ 4ಗೂಗಲ್ ತಾಣಕ್ಕೆ ಭೇಟಿ ನೀಡಬಹುದು. ಅಹಮದಾಬಾದಿನ ರಾಷ್ಟ್ರೀಯ ವಿನ್ಯಾಸಕಾರ ಸಂಸ್ಥೆ ಅಂತಿಮ ಹಂತದ ರೇಖಾಚಿತ್ರಗಳನ್ನು ಗೂಗಲ್ ಗೆ ಆಯ್ದು ಕೊಡಲಿದೆ.

ಒಂದನೆ ತರಗತಿಯಿಂದ 10 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಮೈ ಇಂಡಿಯಾ ಎಂಬ ವಿಷಯವಾಗಿ ರೇಖಾಚಿತ್ರ ರಚಿಸಬೇಕು. ಭಾರತದ ಸಂಗೀತ, ಸಂಸ್ಕೃತಿ, ಕಟ್ಟಡ, ಕ್ರೀಡೆ, ವೈಜ್ಞಾನಿಕ ಸಾಧನೆ..ಇತ್ಯಾದಿ ವಿಷಯಗಳನ್ನು ರೇಖಾಚಿತ್ರಗಳ ಮೂಲಕ ಪ್ರತಿಬಿಂಬಿಸುವ ಸವಾಲನ್ನು ಮಕ್ಕಳಿಗೆ ನೀಡಲಾಗಿದೆ. ಅಂತಿಮ ವಿಜೇತರಿಗೆ ಒಂದು ಲ್ಯಾಪ್ ಟಾಪ್ ಹಾಗೂ ಆತ/ಆಕೆ ಓದುವ ಶಾಲೆಗೆ ತಂತ್ರಜ್ಞಾನ ವಿನಿಮಯ ಸಾಧ್ಯತೆಯನ್ನು ಕಲ್ಪಿಸಲಾಗುವುದು ಎಂದು ಗೂಗಲ್ ಸಂಸ್ಥೆ ಪ್ರಕಟನೆಯಲ್ಲಿ ಹೇಳಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X