ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಕಾ ಧರಿಸಿ ಬಂದರೆ ನೋ ಎಂಟ್ರಿ

By Staff
|
Google Oneindia Kannada News

Burka ban in Bantwal
ಮಂಗಳೂರು, ಆ. 18 : ಕೋಮು ಗಲಭೆ, ವಿಭಿನ್ನ ಕೋಮಿನ ಗುಂಪಿನ ನಡುವೆ ಮರುಕಳಿಸುತ್ತಿರುವ ಹಲ್ಲೆ ಪ್ರಕರಣಗಳಿಂದ ತತ್ತರಿಸಿರುವ ಕರಾವಳಿಯಲ್ಲಿ ಮತ್ತೊಂದು ಸಮಸ್ಯೆ ಆರಂಭಗೊಂಡಿದೆ. ಬಂಟ್ವಾಳ ವಿದ್ಯಾಗಿರಿ ಶ್ರೀ ವೆಂಕಟರಮಣಸ್ವಾಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುರ್ಕಾ ಧರಿಸಿ ಬಂದ ಕಾರಣಕ್ಕಾಗಿ ಕಾಲೇಜ್ ವಿದ್ಯಾರ್ಥಿನಿಯೊಬ್ಬಳನ್ನು ತರಗತಿಗೆ ಹಾಜರಾಗದಂತೆ ನಿರ್ಬಂಧಿಸಿದ ಘಟನೆ ನಡೆದಿದೆ.

ಪ್ರಥಮ ಬಿಕಾಂ ಓದುತ್ತಿರುವ ಆಯೇಷಾ ಆಸ್ಮಿನ್ ಎನ್ನುವ ವಿದ್ಯಾರ್ಥಿನಿ ಸ್ಕಾರ್ಫ್ ಧರಿಸಿ ಬಂದ ಕಾರಣಕ್ಕೆ ಈ ಶಿಕ್ಷೆಗೆ ಒಳಗಾಗಿದ್ದಾಳೆ. ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ದೂರು ನೀಡಿದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಕಳೆದ 8 ರಿಂದ ಕಾಲೇಜಿಗೆ ಬರದಂತೆ ಆಯೇಷಾಗೆ ನಿರ್ಬಂಧ ಹೇರಿದೆ. ಇದರ ಪರಿಣಾಮವಾಗಿ ಮೊದಲ ಅವಧಿಯ ಪರೀಕ್ಷೆಗಳಿಗೆ ಹಾಜರಾಗುವುದರಿಂದಲೂ ಈಕೆ ವಂಚಿತಳಾಗಿದ್ದಾಳೆ.

ಅಂತಿಮ ಬಿಕಾಂನಲ್ಲಿ ಓದುತ್ತಿರುವ ಕೆಲ ವಿದ್ಯಾರ್ಥಿಗಳು ಬುರ್ಕಾ ಧರಿಸಿ ಬರದಂತೆ ತಾಕೀತು ಮಾಡಿದರು. ಅವರ ಸೂಚನೆ ಪಾಲಿಸಿರುವೆ, ಬುರ್ಕಾ ಬದಲು ಸ್ಕಾರ್ಫ್ ಧರಿಸಿ ಬಂದರು ಅದಕ್ಕೂ ಆಕ್ಷೇಪಿಸಿದರು. ಇತರ ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಮುಗಿದಿರುವುದರಿಂದ ಈ ವರ್ಷದ ವ್ಯಾಸಂಗ ಮುಗಿಸಲು ಅವಕಾಶ ಕೊಡಿ ಎನ್ನುವ ಕೋರಿಕೆಯನ್ನು ಕಾಲೇಜ್ ತಳ್ಳಿಹಾಕಿತು ಎಂದು ಆಯೆಷಾ ಆಸ್ಮಿನ್ ತನ್ನ ನೋವು ತೋಡಿಕೊಂಡಿದ್ದಾಳೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X