ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಸ್ಕೆಟ್ ಬಾಲ್ ಆಟಗಾರ ಇದೀಗ ಕೂಲಿ

By Staff
|
Google Oneindia Kannada News

Selvakumar
ಬೆಂಗಳೂರು, ಆ. 17 : ಸಿಟಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದಲ್ಲಿ ನೀವು ಆಳೆತ್ತರದ ವ್ಯಕ್ತಿಯೊಬ್ಬ ಲಗೇಜು ಎತ್ತಿಕೊಂಡು ಒಡಾಡುವುದನ್ನು ಕಂಡಿರುತ್ತೀರಿ. ನೂರಾರು ಜನರ ಮಧ್ಯೆ ಎದ್ದು ಕಾಣುವ ಈ ವ್ಯಕ್ತಿ ಮಾಡುವ ಕೆಲಸ ಕೂಲಿಯಾದರೂ ಈತ ಈ ಹಿಂದೆ ಉತ್ತಮ ಕ್ರೀಡಾಪಟುವಾಗಿದ್ದ. ಆರ್ಥಿಕ ಸಮಸ್ಯೆ ಈತನನ್ನು ಕ್ರೀಡೆಯಿಂದ ದೂರಮಾಡಿ ವಾಪಾಸ್ ಕೂಲಿ ಕೆಲಸಕ್ಕೆ ತಳ್ಳಿತು.

ಹೌದು, ಬಹಳಷ್ಟು ಮಂದಿ ಉತ್ತಮ ಕ್ರೀಡಾಪಟುಗಳಾಗಿದ್ದರೂ ಸೂಕ್ತ ಪ್ರೋತ್ಸಾಹ ದೊರೆಯದೇ ಎಲೆಮರೆಕಾಯಿಯಾಗಿ ಉಳಿಯುತ್ತಾರೆ. ಇಲ್ಲವೇ ಹೊಟ್ಟೆಪಾಡಿಗಾಗಿ ಈ ಕ್ಷೇತ್ರ ತೊರೆದು ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಸಾಲಿಗೆ ಸೇರಿದವರು ಸೆಲ್ವಕುಮಾರ್. ಮೂಲತಃ ತಮಿಳುನಾಡಿನವರಾದ ಸೆಲ್ವಕುಮಾರ್ (ಕೂಲಿ ನಂಬರ್ 230) ಕಳೆದ 13 ವರ್ಷಗಳಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದಾನೆ.

ಈಗಾಗಲೇ ಈತ ಉತ್ತರ ಪ್ರದೇಶ ಕ್ಲಬ್ ಅಶ್ರಯದಲ್ಲಿ ಎರಡು ಬಾರಿ ಬಾಸ್ಕೆಟ್ ಬಾಲ್ ಟೂರ್ನಾಮೆಂಟ್ ಆಟವಾಡಿದ್ದಾನೆ. ಹಾಗೆಂದು ಅದಕ್ಕೆ ಹಣ ಪಡೆಯಲಿಲ್ಲ. ಬದಲಿಗೆ ವಸತಿ ಹಾಗೂ ಊಟದ ಸೌಲಭ್ಯಕ್ಕಷ್ಟೆ ತೃಪ್ತಿಗೊಂಡಿದ್ದಾನೆ. 2002 ರಿಂದ 2004 ರವರೆಗೆ ಲಖನೌದಲ್ಲಿ ಸುಮಾರು ಎರಡು ವರ್ಷಗಳ ಕಾಲ ತನ್ನ ಕ್ರೀಡೆಯ ಮೇಲಿನ ವ್ಯಾಮೋಹದಿಂದ ತಂಗಿದ್ದನು. ಆ ಸಮಯದಲ್ಲಿ ಆತನ ಅಣ್ಣನಿಗೆ ಸರ್ಜರಿ ಮಾಡಿಸಬೇಕಾಗಿತ್ತು. ತನಗೆ ಸಹಾಯ ಮಾಜುವಂತೆ ಕ್ಲಬ್ ಸೆಲ್ವಂ ಕೋರಿದ. ಇದನ್ನು ಕ್ಲಬ್ ಪರಿಗಣಿಸಲಿಲ್ಲ. ಸಹೋದರ ಮೃತಪಟ್ಟ. ತನ್ನ ಆರ್ಥಿಕ ಸಮಸ್ಯೆಯೇ ಇದಕ್ಕೆಲ್ಲ ಕಾರಣ ಎಂದು ಬಾಸ್ಕೆಟ್ ಬಾಲ್ ಗೆ ತಿಲಾಂಜಲಿ ನೀಡಿ ಕೂಲಿ ಕೆಲಸ ಆಯ್ದುಕೊಂಡಿರುವುದಾಗಿ ಸೆಲ್ವಂ ಹೇಳಿತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಎಲ್ಲರಿಗೂ ಅಚ್ಚಮೆಚ್ಚಿನವರಾದ ಸೆಲ್ವಂ ಅವರನ್ನು ಎಲ್ಲರೂ ಅಮಿತಾಬ್ ಬಚ್ಚನ್ ಎಂದೇ ಕರೆಯುತ್ತಾರೆ. ಕಾರಣ ಇವರ ಎತ್ತರ ಬರೋಬ್ಬರಿ 7.2 ಫೂಟ್

(ಸ್ನೇಹಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X