ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ

By Staff
|
Google Oneindia Kannada News

CM BSY interview by Ramya
ಬೆಂಗಳೂರು ಆ 14: "ಡಾ ರಾಜ್ ಮತ್ತು ಮಿನುಗುತಾರೆ ಕಲ್ಪನಾ ಚಿತ್ರವೆಂದರೆ ನನಗೆ ಪ್ರಾಣ. ದಿನಕ್ಕೆ ಮೂರು ಸಿನಿಮಾ ನೋಡಿದ್ದೂ ಇದೆ. ಕಸ್ತೂರಿ ನಿವಾಸದ 'ಆಡಿಸಿನೋಡು ಬೀಳಿಸಿನೋಡು' ಹಾಡು ಅಂದ್ರೆ ನನಗೆ ಬಹಳ ಇಷ್ಟ. ನನಗೆ ಅವಕಾಶ ಸಿಕ್ಕರೆ ಸಿನೆಮಾದಲ್ಲಿ ನಟಿಸಬೇಕೆನ್ನುವ ಆಸೆಯಿದೆ. ಆದರೆ, ಅದು ನನ್ನ ಹೋರಾಟದ ಬದುಕಿಗೆ ಸಂಬಂಧಿಸಿರಬೇಕು. ಛತ್ರಪತಿ ಶಿವಾಜಿ ಅಥವಾ ಭಗತ್ ಸಿಂಗ್ ರಂಥ ಪಾತ್ರವಾಗಬೇಕು"

ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ಆಗಸ್ಟ್ 14 ರ ಸಂಚಿಕೆಯಲ್ಲಿ ಚಲನಚಿತ್ರ ನಟಿ ರಮ್ಯಾ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಮೇಲಿನ ಮಾತುಗಳನ್ನು ಆಡಿದ್ದಾರೆ. ಅವರು ಆಡಿರುವ, ಕನ್ನಡ ಓದುಗರೊಂದಿಗೆ ಹಂಚಿಕೊಂಡಿರುವ, ಇನ್ನು ಕೆಲವು ಮಾತುಗಳ, ಸಾರ, ಸಂಗ್ರಹವನ್ನು ಸಂಕ್ಷಿಪ್ತಗೊಳಿಸಿ ಇಲ್ಲಿ ಸಾದರಪಡಿಸಲಾಗಿದೆ.

*ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಬೂಕನಕೆರೆ ನನ್ನ ಜನ್ಮ ಭೂಮಿ.
*ಮಂಡ್ಯ ನನ್ನ ಕರ್ಮಭೂಮಿ ಮತ್ತು ಧರ್ಮ ಭೂಮಿಯಾಗಿದೆ.
*ವೀರೇಂದ್ರ ಪಾಟೀಲ್ ಮತ್ತು ದೇವರಾಜ್ ಅವರು ನನ್ನ ನೆಚ್ಚಿನ ರಾಜಕಾರಣಿಗಳು
*ಅಂಥವರು ಈಗ ಕಡಿಮೆ.ಇದ್ದಾರೆ ಆದರೆ ಹೆಸರು ಹೇಳುವುದಿಲ್ಲ. ಸ್ಟ್ಯಾಂಡರ್ಡ್ ಕಡಿಮೆ ಆಗಿದೆ
*ದೇವೇಗೌಡರ ಹಾರ್ಡ್ ವರ್ಕ್ ಮತ್ತು ಪರಿಶ್ರಮದ ಬಗ್ಗೆ ನನಗೆ ಬಹಳ ಗೌರವವಿದೆ.
*ಆತಂಕವಾದಾಗ ದೇಗುಲಕ್ಕೆ ಹೋಗುತ್ತೇನೆ.

*ವೀರಭದ್ರ ಶಾಸ್ತ್ರಿಗಳ ಹಿರಿಯ ಮಗಳು ಮೈತ್ರಾದೇವಿಯನ್ನು ವಿವಾಹವಾದೆ.
*ಶಾಸ್ತ್ರಿಯವರದ್ದು ಗೌರವಸ್ಥ ಮತ್ತು ಸಂಸ್ಕಾರವ೦ತ ಮನೆತನ.
*ಮೈತ್ರಾದೇವಿ ಈಗ ಇದ್ದಿದ್ದರೆ ಚೆನ್ನಾಗಿತ್ತು. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಅವಳು ಇದ್ದಳು.
*ಅವಳು ಮೃತಳಾದಾಗ ನನಗೆ ಬಹಳ ಆಘಾತವಾಗಿತ್ತು.
*ನನಗೆ ದಾರಿದೀಪವಾಗಿದ್ದ ಆಕೆಯ ನೆನಪು ಪ್ರತಿ ನಿಮಿಷವೂ ಕಾಡುತ್ತಿದೆ.
*ಅವಳ ಫೋಟೋವನ್ನು ದೇವರ ಮನೆಯಲ್ಲೇ ಇಟ್ಟುಕೊಂಡಿದ್ದೇನೆ.

*ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ಎಂದೂ ಬಯಸಿದವನಲ್ಲ.
*ರಾಘವೇಂದ್ರ ಮೂರು ವರ್ಷಗಳ ಹಿಂದೆ ಪುರಸಭೆ ಸದಸ್ಯನಾಗಿದ್ದ.
*ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಮತ್ತು ರಾಜಕೀಯ ವಾತಾವರಣವೇ ಅವನನ್ನು ಸ್ಪರ್ಧಿಸುವಂತೆ ಮಾಡಿತು.
*ಭಗವಂತನ ಇಚ್ಚೆಯಂತೆ ಬಂಗಾರಪ್ಪನವರನ್ನು ಸೋಲಿಸಿದ.
*ಈ ಬಗ್ಗೆ ಸಂತೋಷವೇ ಆಗಿದೆ.

*ನನ್ನ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ನಾನು ಬಯಸುತ್ತಿಲ್ಲ.
*ನಾನು ಹೆದರುವುದು ದೇವರಿಗೆ ಮತ್ತು ಆರ್ ಎಸ್ ಎಸ್ ಸಂಘಟನೆಗೆ
*ಸಂಘದ ಹಿರಿಯರಿಗೆ ನನ್ನ ಕಿವಿಹಿಂಡಿ ಬುದ್ದಿ ಹೇಳುವಸ್ಟು ಅಧಿಕಾರವಿದೆ.
*ತಂದೆ ತಾಯಿಗಿಂತ ಹೆಚ್ಚಾಗಿ ಸಂಘವು ಶಿಸ್ತು ಮತ್ತು ದೇಶಭಕ್ತಿಯನ್ನು ಕಲಿಸಿಕೊಟ್ಟಿದೆ.

*ಕಷ್ಟ ಎದುರಾದಾಗ ಸಂಘದ ಪ್ರಮುಖ ಜಯದೇವ್ ಅವರಲ್ಲಿ ಹಂಚಿಕೊಳ್ಳುತ್ತೇನೆ.
*ಅವರು ನೀಡುವ ಸಲಹೆ, ಮಾರ್ಗದರ್ಶನ, ಸೂಚನೆಯನ್ನು ಪಾಲಿಸಿಕೊಂಡು ಬರುತ್ತೇನೆ.
*ವಾಜಪೇಯಿಯವರ ಪ್ರಭಾವ ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡುವಂತೆ ಮಾಡಿತ್ತು.

ಅಂತಿಮವಾಗಿ ರಾಜಕಾರಣ ಎಂದರೆ ಎನು ಎಂಬ ಪ್ರಶ್ನೆಗೆ "ಜನಸೇವೆ" ಎಂಬ ಉತ್ತರವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಬೈದವೆ, ಸುವರ್ಣ ಟಿವಿಯಲ್ಲಿ ಈ ಸಂದರ್ಶನ ನಾಳೆ ಶನಿವಾರ ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆಗೆ ಪ್ರಸಾರವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X