ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವೀಡನ್ ಜೊತೆ ಸಾಂಸ್ಕೃತಿಕ ವಿನಿಮಯ ಒಪ್ಪಂದ

By Staff
|
Google Oneindia Kannada News

BSY signs MoU with Swedan
ಬೆಂಗಳೂರು, ಆ. 13 : ಸಾಂಸ್ಕೃತಿಕ ವಲಯದಲ್ಲಿನ ಜ್ಞಾನ ಮತ್ತು ಅನುಭವಗಳ ವಿನಿಮಯಕ್ಕಾಗಿ ಕರ್ನಾಟಕ ಮತ್ತು ಸ್ವೀಡನ್ ದೇಶದ ಪ್ರಾಂತ್ಯವಾದ ವಸ್ತ್ರ ಗೋಟಾಲ್ಯಾಂಡ್ ಪರಸ್ಪರ ಒಪ್ಪಂದ ಮಾಡಿಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾಗೂ ಗೋಟಾಲ್ಯಾಂಡ್ ಪ್ರಾಂತ್ಯದ ಸಾಂಸ್ಕೃತಿಕ ವ್ಯವಹಾರಗಳ ಅಧ್ಯಕ್ಷ ಲಾರ್‍ಸ್ ರ್ನೋಡಸ್ಟ್ರಮ್ ಅವರ ಪ್ರತಿನಿಧಿಗಳು ಇಂದು ಇಲ್ಲಿ ಒಪ್ಪಂದಕ್ಕೆ ಸಹಿಹಾಕಿದರು.

ಕಳೆದ ಎರಡು ವರ್ಷಗಳಿಂದ ಕಲೆ, ಸಂಸ್ಕೃತಿ ಮತ್ತು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಖಾಸಗಿ ಹಾಗೂ ಸರ್ಕಾರಿ ವ್ಯಕ್ತಿಗಳು, ಸಂಘ ಸಂಸ್ಥೆಗಳ ನಡುವೆ ಹಲವಾರು ಸುತ್ತಿನ ಮಾತುಕತೆ ಮತ್ತು ಸಮಾಲೋಚನಾ ಸಭೆಗಳು ನಡೆದಿದ್ದವು. ಈಗ ಅವುಗಳು ಒಪ್ಪಂದದ ಮೂಲಕ ಅಧಿಕೃತಗೊಳ್ಳುತ್ತಿವೆ.

ಈ ಸಾಂಸ್ಕೃತಿಕ ವಿನಿಮಯ ಒಪ್ಪಂದದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಹಾಗೂ ಸ್ವೀಡನ್ ವಸ್ತ್ರ ಗೋಟಾಲ್ಯಾಂಡ್‌ನ ಸಂಸ್ಕೃತಿ ವ್ಯವಹಾರಗಳ ಸಮಿತಿ ಪಾಲ್ಗೊಂಡಿವೆ. ಸಾಂಸ್ಕೃತಿಕ ವಲಯದಲ್ಲಿನ ಜ್ಞಾನ ಮತ್ತು ಅನುಭವಗಳ ವಿನಿಮಯದ ಜೊತೆಗೆ, ನೃತ್ಯ, ಚಲನಚಿತ್ರ, ಪ್ರದರ್ಶಕ ಕಲೆ, ಸಿನಿಮಾ ಮತ್ತು ಮಾಧ್ಯಮ, ಛಾಯಾಚಿತ್ರ, ಗ್ರಾಫಿಕ್ಸ್ ಮತ್ತು ಅನಿಮೇಷನ್, ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳ ಸಂಪರ್ಕ ಸಂಯೋಜನೆ, ಚಲನಚಿತ್ರ ರಸಗ್ರಹಣ ಮತ್ತು ಚಲನಚಿತ್ರೋತ್ಸವಗಳು, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಲಿಕೆ ಹಾಗೂ ಕಥೆ ಹೇಳುವ ಕಲೆಯಲ್ಲಿ ಪರಸ್ಪರ ಸಹಕಾರ ಮತ್ತು ಕಾರ್ಯಕ್ರಮಗಳನ್ನು ಉಭಯ ರಾಷ್ಟ್ರಗಳು ಹಮ್ಮಿಕೊಳ್ಳಲಿವೆ.

ವಸ್ತ್ರಗೋಟಾಲ್ಯಾಂಡ್ ಪ್ರಾಂತ್ಯವು ಸ್ವೀಡನ್ ದೇಶದ ಪಶ್ಚಿಮ ಕರಾವಳಿ ತೀರದಲ್ಲಿರುವ ಅತೀ ದೊಡ್ಡ ಪ್ರಾಂತ್ಯ. ಸುಮಾರು 24 ಸಾವಿರ ಚದುರ ಕಿ.ಮೀ ವಿಸ್ತೀರ್ಣಹೊಂದಿದೆ. ಈ ಪಾಂತ್ಯದಲ್ಲಿರುವ ಗೋಟೆಬರ್ಗ್ ವೇಗದ ವೃದ್ಧಿ ಹೊಂದುತ್ತಿರುವ ನಗರ ಪ್ರದೇಶವಾಗಿದೆ. ವೋಲ್ವೋ ಸಾರಿಗೆ ಕಂಪನಿಯ ಕೇಂದ್ರ ಕಚೇರಿ ಗೋಟೆಬರ್ಗ್‌ನಲ್ಲಿ. ವೋಲ್ವೋ ಬಸ್‌ಗಳು ಬೆಂಗಳೂರಿನ ಜನತೆಗೆ ಚಿರಪರಿಚಿತ. ಹೀಗಾಗಿ ಬೆಂಗಳೂರು ಹಾಗೂ ಗೊಟೆಬರ್ಗ್ ಸಹಜವಾಗಿ ಹಳೆ ಸಂಬಂಧವನ್ನು ಹೊಂದಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X