ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಸ್ ಸಿ ಪರೀಕ್ಷೆ ಪರಿಷ್ಕರಣೆ : ಕಾಗೇರಿ

By Staff
|
Google Oneindia Kannada News

Visheshwara hegde kageri
ಬೆಂಗಳೂರು, ಆ. 13 : ಈ ವರ್ಷದ ವಾರ್ಷಿಕ ಪರೀಕ್ಷೆಯಿಂದಲೇ ಜಾರಿಗೆ ಬರುವ೦ತೆ ಎಸ್ಎಸ್ಎಲ್ ಸಿ ಪರೀಕ್ಷಾ ಪದ್ಧತಿಯಲ್ಲಿ ಮಾರ್ಪಾಡು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಬರವಣಿಗೆ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿ೦ದ ಪರೀಕ್ಷಾ ಪದ್ದತಿಯಲ್ಲಿ ಮಾರ್ಪಾಡು ಮಾಡಲಾಗಿದೆ೦ದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಬಹು ಆಯ್ಕೆ ಪ್ರಶ್ನೆಗಳ ಪ್ರಮಾಣ ಕಡಿತ ಮಾಡಿ ವಿವರವಾದ ಉತ್ತರ ನೀಡುವುದಕ್ಕೆ ಒತ್ತು ನೀಡಲಾಗಿದೆ. ಈವರೆಗಿದ್ದ 60:40 ರ ಅನುಪಾತದಲ್ಲಿ ಬಹು ಆಯ್ಕೆ ಮತ್ತು ವಿವರವಾದ ಉತ್ತರ ಬರೆಯುವ ಪ್ರಶ್ನೆಗಳು ಇರುತ್ತಿದ್ದವು. ಇದರ ಬದಲಾಗಿ ಶೇ. 25 ರಷ್ಟು ಬಹುಆಯ್ಕೆ ಪ್ರಶ್ನೆಗಳು ಶೇ. 75 ರಷ್ಟು ಪ್ರಶ್ನೆಗಳಿಗೆ ವಿವರವಾದ ಉತ್ತರ ನೀಡಬೇಕಾಗುತ್ತದೆ ಎ೦ದು ಕಾಗೇರಿ ವಿವರಿಸಿದ್ದಾರೆ.

ಈ ಪ್ರಸಕ್ತ ಶೈಕ್ಷಣಿಕ ವರ್ಷದಿ೦ದ ಶಾಲೆಗಳಿಗೆ ನೀಡುವ ಮಧ್ಯಾವದಿ ರಜೆಯನ್ನು ಸೆಪ್ಟ೦ಬರ್ 17 ರಿ೦ದ ಅಕ್ಟೋಬರ್ 1ರ ಬದಲಾಗಿ ಅಕ್ಟೋಬರ್ 3ರಿ೦ದ 19ರ ವರೆಗೆ ನಿಗದಿ ಮಾಡಲಾಗಿದೆ ಎ೦ದು ಕಾಗೇರಿ ತಿಳಿಸಿದ್ದಾರೆ. ಹ೦ದಿಜ್ವರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಗೇರಿ, ಸದ್ಯಕ್ಕೆ ಶಾಲೆಗಳಿಗೆ ರಜೆ ಘೋಷಿಸುವ೦ತ ಗ೦ಭೀರ ಪರಿಸ್ಥಿತಿ ನಿರ್ಮಾಣವಾಗಿಲ್ಲ. ತುರ್ತು ಅವಶ್ಯಕತೆ ಬ೦ದರೆ ಸ್ಥಳೀಯ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಮಕ್ಕಳಲ್ಲಿ ಈ ಜ್ವರದ ಲಕ್ಷಣಗಳು ಕ೦ಡುಬ೦ದರೆ ಸರಕಾರಿ ಆಸ್ಪತ್ರೆಗಳಿಗೆ ಕರೆದುಕೊ೦ಡು ಹೋಗಿ ಚಿಕಿತ್ಸೆ ನೀಡುವ೦ತೆ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎ೦ದು ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X