ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಜ್ಞ ಪ್ರತಿಮೆ ಅನಾವಣರಕ್ಕೆ ಚೆನ್ನೈ ಸಜ್ಜು

By Staff
|
Google Oneindia Kannada News

Sarvajna statue to be unvelied in Chennai on August 13
ಚೆನ್ನೈ, ಆ. 12 : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚೆನ್ನೈ ನಗರದ ಮದ್ಯಭಾಗದಲ್ಲಿರುವ ಕನ್ನಡಿಗರೇ ಹೆಚ್ಚಾಗಿರುವ ಅಯನಾವರಂನಲ್ಲಿ ಪ್ರದೇಶದ ಜೀವಾ ಪಾರ್ಕ್ ನಲ್ಲಿ ಕನ್ನಡದ ಆದಿಕವಿ ಸರ್ವಜ್ಞನ ಪ್ರತಿಮೆಯನ್ನು ಗುರುವಾರ ಸಾಯಂಕಾಲ 4 ಗಂಟೆಗೆ ಅನಾವರಣ ಮಾಡಲಿದ್ದಾರೆ.

ಗುರುವಾರ ನಡೆಯಲಿರುವ ಸರಕಾರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಆರಂಭವಾಗಿದ್ದು, ಮದ್ರಾಸ್ ಕನ್ನಡ ಸಂಘ ಸೇರಿದಂತೆ ಚೆನ್ನೈ ನಗರದಲ್ಲಿ ವಾಸವಾಗಿರುವ ಕನ್ನಡಿಗರು ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಕಳೆದ ವಾರದಿಂದ ಜೀವಾ ಪಾರ್ಕ್ ನಲ್ಲಿ ಕನ್ನಡಿಗರು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ಅಯನಾವರಂ ಪ್ರದೇಶದ ಯುನೈಟೆಡ್ ಇಂಡಿಯಾ ಕಾಲೋನಿಯಲ್ಲಿ ವಾಸಿಸುವ ಬಹುತೇಕ ಜನರು ಕನ್ನಡಿಗರು ಎನ್ನುವುದು ವಿಶೇಷ.

9 ಅಡಿ ಎತ್ತರದ ಸರ್ವಜ್ಞರ ಕಂಚಿನ ಪ್ರತಿಮೆಯನ್ನು ಈಗಾಗಲೇ ಪಾರ್ಕ್ ಗೆ ತರಲಾಗಿದೆ. ಅನಾವರಣ ಸಂದರ್ಭದಲ್ಲಿ ಯಾವುದೇ ಅವಗಢ ಸಂಭವಿಸದಂತೆ ಬಿಗಿಭದ್ರತೆಯನ್ನು ಒದಗಿಸಲಾಗಿದೆ. ಸುಮಾರು 100ಕ್ಕೂ ಹೆಚ್ಚು ಕಾರ್ಮಿಕರು ಪಾರ್ಕ್ ಸುಚಿತ್ವದಲ್ಲಿ ತೊಡಗಿದ್ದಾರೆ. ಮೈಸೂರಿನ ಶಿಲ್ಪಿ ವಿಮಲಾ ಆಚಾರ್ಯ ಅವರು ಸರ್ವಜ್ಞ ಮೂರ್ತಿ ತಯಾರಿಸಿದ್ದಾರೆ. ಚೆನ್ನೈ ಮಹಾನಗರ ಪಾಲಿಕೆ ಹಾಗೂ ಕರ್ನಾಟಕದ ಲೋಕೋಪಯೋಗಿ ಇಲಾಖೆಗಳು ಅನಾವರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿವೆ.

ಹೆಸರಾಂತ ಎಡಪಂಥೀಯ ಮುಖಂಡ ಜೀವಾ ಅವರ ಹೆಸರನ್ನೇ ಈ ಪಾರ್ಕ್ ಗೆ ಇಡಲಾಗಿದೆ. ಜೀವಾ ಅವರೇ ಈ ಪಾರ್ಕ್ ಗೆ ಕನ್ನಡಿಗರ ಪಾರ್ಕ್ ಎಂದು ನಾಮಕರಣ ಮಾಡಿದ್ದಾರೆ. ರಾಜಕೀಯ ತಿಕ್ಕಾಟ ಮತ್ತು ಸಂಘಟನೆಗಳು ವಿರೋಧದ ನಡುವೆಯೂ ತಿರುವಳ್ಳುವರ್ ಹಾಗೂ ಸರ್ವಜ್ಞ ಪ್ರತಿಮೆ ಅನಾವರಣ ಆಗುತ್ತಿರುವುದು ಸಂತಸದ ಸಂಗತಿ ಎಂದು ಮದ್ರಾಸ್ ರಿಫೈನರಿ ಲಿಮಿಟೆಡ್ ನ ಉದ್ಯೋಗಿ ಚೆನ್ನೈ ನಿವಾಸಿ ಕನ್ನಡಿಗ ಅಶೋಕ್ ಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರ್ಣರಂಜಿತ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಚೆನ್ನೈನಲ್ಲಿರುವ ಕನ್ನಡ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಕರ್ನಾಟಕದಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರ ದಂಡು, ಸಾಹಿತಿಗಳಾದ ಜಿಎಸ್ ಶಿವರುದ್ರಪ್ಪ, ಹಂಪಾ ನಾಗರಾಜ್, ಚಿದಾನಂದಮೂರ್ತಿ ಹಾಗೂ ಚಿತ್ರನಟರಾದ ವಿಷ್ಣುವರ್ಧನ್, ಪಾರ್ವತಮ್ಮ ರಾಜ್ ಕುಮಾರ್, ಕರ್ನಾಟಕ ಚಲನಚಿತ್ರ ಆಡಳಿತ ಮಂಡಳಿ ಅಧ್ಯಕ್ಷೆ ಜಯಮಾಲಾ, ತಾರಾ, ಬಿ ಸರೋಜಾದೇವಿ, ವನಿತಾವಾಸು, ರಾಕ್ ಲೈನ್ ವೆಂಕಟೇಶ್, ಸಾ ರಾ ಗೋವಿಂದು, ರಮೇಶ್ ಅರವಿಂದ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ವಿಶೇಷವೆಂದರೆ ತಮಿಳು ಸಂಘಟನೆಗಳು ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಯಾವುದೇ ಅಡ್ಡಿ ವ್ಯಕ್ತಪಡಿಸಿಲ್ಲ.

ಅಂದ ಹಾಗೆ, ಕರ್ನಾಟಕದಲ್ಲಿ ಸರ್ವಜ್ಞನ ಪ್ರತಿಮೆ ಎಲ್ಲಿದೆ?

ಕಾರ್ಯಕ್ರಮ ವಿವರ

* ಆಗಸ್ಟ್ 13ರ ಗುರುವಾರ ಸಂಜೆ 4 ಗಂಟೆ
* ಸ್ಥಳ : ಜೀವಾ ಪಾರ್ಕ್, ಅಯನಾವರಂ, ಚೆನ್ನೈ
* ಕಾರ್ಯಕ್ರಮ ಆರಂಭವಾಗುವುದು ತಮಿಳು ನಾಡಗೀತೆಯೊಂದಿಗೆ.
* ಸ್ವಾಗತ ಭಾಷಣ ಮಾಡಲಿರುವವರು ತಮಿಳುನಾಡು ಮಾಹಿತಿ ಇಲಾಖೆ ಸಚಿವ ಪರಿಧಿ ಇಳಂವಳುದಿ.
* ಮುಖ್ಯಮಂತ್ರಿ ಎಂ.ಕರುಣಾನಿಧಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಮೆ ಅನಾವರಣಗೊಳಿಸುತ್ತಾರೆ.
* ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಆಶಯ ಭಾಷಣ ಮಾಡಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X