ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿಕೋರರಿಗೆ ಶಿಕ್ಷೆ ವಿಧಿಸಿ : ಅಮೆರಿಕ

By Staff
|
Google Oneindia Kannada News

Hafeez Saeed
ನವದೆಹಲಿ, ಆ. 12 : ಕಳೆದ ವರ್ಷ ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿರುವ ಉಗ್ರರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ತಾಕೀತು ಮಾಡಿದೆ. ಈ ಮಧ್ಯೆ ಅಮೆರಿಕ ಗುಪ್ತಚರ ಇಲಾಖೆ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ) ಮುಂಬೈ ದಾಳಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ವಿಚಾರಣೆಯನ್ನು ನಡೆಸಲಿದೆ ಎಂದಿದ್ದಾರೆ.

ಇದೇ ವಾರದಲ್ಲಿ ಅಜ್ಮಲ್ ಅಮೀರ್ ಕಸಬ್ ನ ವಿಚಾರಣೆ ನಡೆಸಲಾಗುವುದು. ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಭಾರತ ತಳೆದಿರುವ ನಿಲುವಿಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ ಎಂದು ಪಾಕಿಸ್ತಾನದಲ್ಲಿ ಅಡಗಿರುವ ಎಲ್ಲ ಉಗ್ರರಿಗೂ ಶಿಕ್ಷೆ ವಿಧಿಸಬೇಕಾಗಿರುವುದು ಅಲ್ಲಿನ ಸರಕಾರದ ಕೆಲಸ, ಆ ಕೆಲಸವನ್ನು ಪಾಕ್ ಮಾಡಲೇಬೇಕು ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಟಿಮೋಟಿ ಜೆ ರೋಮರ್ ತಿಳಿಸಿದ್ದಾರೆ.

ಮುಂಬೈ ದಾಳಿಕೋರ ಜಮಾತೆ ಉದ್ ದವಾ ಮುಖಂಡ ಹಫೀಜ್ ಮೊಹ್ಮದ್ ಸಯೀದ್ ಗೆ ಸಂಬಂಧಿಸಿದಂತೆ ಪಾಕ್ ಸರಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅನುಮಾನ ಉಂಟಾಗುತ್ತದೆ. ಆರೋಪಿಯ ವಿರುದ್ಧ ಪಾಕ್ ಸರಕಾರ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲವಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ರೋಮರ್ ಅಸಮಾಧಾನ ವ್ಯಕ್ತಪಡಿಸಿದರು. ಮುಂಬೈ ದಾಳಿಯಲ್ಲಿ ಸಯೀದ್ ಕೈವಾಡವಿದೆ ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕ್ ಆಂತರಿಕ ಸಚಿವ ರಹಮಾನ್ ಮಲೀಕ್ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಪಾಕ್ ಸುಪ್ರಿಂಕೋರ್ಟ್ ಸಯೀದ್ ಅವರನ್ನು ಇದಗೇ ಕಾರಣಕ್ಕೆ ಬಿಡುಗಡೆ ಮಾಡಿತ್ತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X