ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದ ಭುವನ್ ಇಂದು ಲೋಕಾರ್ಪಣೆ

By Staff
|
Google Oneindia Kannada News

Madavan Nair
ನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ.

ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ ಸೂಕ್ಷ್ಮ ತಾಣಗಳನ್ನು ಹೊರತುಪಡಿಸಿ ಬೇರೆಲ್ಲಾ ಜಾಗಗಳನ್ನು ಈ ವೆಬ್ ಸೈಟ್ ನಲ್ಲಿ 10 ಮಿ ದೂರದಿಂದ ನೋಡಬಹುದು. ಇಸ್ರೋದ 7 ಉಪಗ್ರಹಗಳು ವರ್ಷದ ಹಿಂದೆ ತೆಗೆದ 3ಡಿ ಚಿತ್ರಗಳಿವು. ಕಾರಿನಷ್ಟು ಸಣ್ಣದಾದ ವಸ್ತುವನ್ನು ಕೂಡ ಇವು ಸ್ಪಷ್ಟವಾಗಿ ತೋರಿಸುತ್ತೇವೆ. ಗೂಗಲ್ ಅರ್ಥ್ ಅಥವಾ ಅಂತಹ ಬೇರಾವುದೇ ವೆಬ್ ಸೈಟ್ ಗಿಂತ ಹೆಚ್ಚು ಸ್ಪಷ್ಟ ಚಿತ್ರಗಳು ಭುವನ್ ನಲ್ಲಿ ಕಾಣಿಸುತ್ತದೆ.

ಅತಿವೃಷ್ಟಿ, ಅನಾವೃಷ್ಟಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಲೆಂದು ಇದನ್ನು ಸಿದ್ಧಪಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ತಿಳಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X