ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಇಲಾಖೆ ಸತ್ತುಹೋಗಿದೆ : ಡಿಕೆಶಿ

By Staff
|
Google Oneindia Kannada News

DK Shivakumar
ಬೆ೦ಗಳೂರು, ಆ. 11 : ಬಾಯಾರಿದಾಗ ಬಾವಿತೋಡುವ ಧೋರಣೆ ಯಡಿಯೂರಪ್ಪ ಸರಕಾರದ್ದು. ಮಹಾಮಾರಿ ಹ೦ದಿಜ್ವರ ದೇಶಾದ್ಯ೦ತ ಮತ್ತು ರಾಜ್ಯದಲ್ಲೂ ಆವರಿಸಿದೆ. ಆದರೆ ನಮ್ಮ ಆರೋಗ್ಯ ಇಲಾಖೆ ಸತ್ತು ಮಲಗಿದೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎ೦ದು ಕಾ೦ಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊ೦ಡಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು ಆ ಹುದ್ದೆಗೆ ಅನರ್ಹ ವ್ಯಕ್ತಿ. ಸ್ವಲ್ಪವೂ ಕಾಳಜಿ ಇರದ ಬೇಜವಾಬ್ದಾರಿ ಸಚಿವ ಮುಖ್ಯಮ೦ತ್ರಿಗಳು ಇ೦ತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬೇರೊಬ್ಬರಿಗೆ ಈ ಹುದ್ದೆ ನೀಡುವುದು ಒಳಿತು. ಈ ಸ೦ದರ್ಭದಲ್ಲಿ ರಾಜಕೀಯ ಮಾತನಾಡಿದರೆ ತಪ್ಪಾಗುತ್ತದೆ. ಸಮರೋಪಾದಿಯಲ್ಲಿ ರೋಗ ನಿವಾರಣೆಗೆ ಸರಕಾರ ಸಜ್ಜಾಗಲಿ ಎ೦ದು ಶಿವಕುಮಾರ್ ಕಿವಿಮಾತು ಹೇಳಿದರು.

ಬೆ೦ಗಳೂರು ಮತ್ತು ಕರಾವಳಿ ನಗರಗಳಲ್ಲಿ ರೋಗಿಗಳು ಪತ್ತೆಯಾಗಿದ್ದು, ಸರಕಾರ ಸೂಕ್ತ ಕ್ರಮ ಕೈಗೊ೦ಡಿಲ್ಲ. ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲಾ - ಕಾಲೇಜುಗಳಲ್ಲಿ ಈ ರೋಗ ಹರಡದ೦ತೆ ಎಚ್ಚರ ವಹಿಸಬೇಕೆ೦ದು ಡಿಕೆಶಿ ಸರಕಾರಕ್ಕೆ ಸಲಹೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X