ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿಕಿಪಿಡಿಯಾ ಆರಂಭಕ್ಕೆ ಸಿದ್ದತೆ

By Staff
|
Google Oneindia Kannada News

Mukhyamantri chandru
ಬೆಂಗಳೂರು, ಆ. 6 : ಕನ್ನಡ ವಿಕಿಪಿಡಿಯಾ ಮಾದರಿಯ ಪೋರ್ಟಲ್ ಆರಂಭದಿಂದ ಕನ್ನಡ ಬಳಕೆ ಹೆಚ್ಚಲಿದ್ದು, ಕನ್ನಡ ಭಾಷೆ ಶ್ರೀಮಂತಗೊಳ್ಳಲಿದೆ ಎಂದು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಪ್ರೊ. ತಡಗೋಪನ್ ಅವರು ತಿಳಿಸಿದರು.

ಕರ್ನಾಟಕ ಜ್ಞಾನ ಆಯೋಗವು ' ಕನ್ನಡ ವಿಕಿಪಿಡಿಯಾ ಮಾದರಿಯ ಪೋರ್ಟಲ್' ಅಭಿವೃದ್ಧಿ ಪಡಿಸುವ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಾ ಕನ್ನಡ ವಿಕಿಪಿಡಿಯಾದಿಂದ ಶೈಕ್ಷಣಿಕ ಮತ್ತು ಕಲಿಕಾ ಉದ್ದೇಶಗಳಿಗೆ ಈಗಿರುವ ಸಾಮಗ್ರಿ ಕೊರತೆ ನೀಗಲಿದೆ. ವಿಕಿಪಿಡಿಯಾದಲ್ಲಿನ ಕನ್ನಡ ವಿಚಾರಗಳು ಜಾಗತಿಕ ಓದುಗರ ಗಮನ ತಲುಪುವ ಜೊತೆಗೆ ಕನ್ನಡ ಬರಹಗಾರರ, ಸಾಹಿತಿಗಳ ಪರಿಚಯವನ್ನು ಮಾಡುತ್ತದೆ ಎಂದರು. ಕನ್ನಡ ಭಾಷೆ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಏರಿಸುವುದರ ಜೊತೆಗೆ ಕನ್ನಡ ಗಣಕೀಕರಣ ಕಾರ್ಯಕ್ಕೆ ಇದು ಶಕ್ತಿ ತುಂಬಲಿದೆ. ಈ ಪೋರ್ಟಲ್ ಕನ್ನಡ ಭಾಷೆಯಲ್ಲಿ ಯಾವುದೇ ಮಾಹಿತಿಗೆ ಏಕೈಕ ಮೂಲವಾಗಲಿದೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕರ್ನಾಟಕ ಜ್ಞಾನ ಆಯೋಗದ ವತಿಯಿಂದ ಕನ್ನಡದಲ್ಲಿ ಕನ್ನಡ ವಿಚಾರಗಳು ಲಭ್ಯವಾಗುವಂತೆ ಈ ಯೋಜನೆ ರೂಪಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಈಗಾಗಲೇ ಯೋಜನಾ ಅನುಷ್ಠಾನಕ್ಕಾಗಿ 2 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರಪಂಚದ ಎಲ್ಲಾ ವಿಚಾರಗಳು ಇದರಲ್ಲಿ ಲಭ್ಯವಾಗಲಿವೆ. ಭಾಷೆಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡದ ಈ ಪೋರ್ಟಲ್ ಕನ್ನಡ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ನೆರವಾಗಲಿದೆ ವಿಕಿಪಿಡಿಯಾ ಹೆಸರಿನ ಬದಲಾಗಿ ಕನ್ನಡದ ಹೆಸರನ್ನು ನೀಡಲಾಗುತ್ತಿದ್ದು ಸಾಹಿತಿ, ಬರಹಗಾರರು ಈ ವಿಚಾರದಲ್ಲಿ ಸಲಹೆ ನೀಡಲಿದ್ದಾರೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X