ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಪರ ಸಂಘಟನೆಗಳಿಗೆ ಹಿನ್ನಡೆ

By Staff
|
Google Oneindia Kannada News

High court
ಬೆಂಗಳೂರು, ಆ. 6 : ಕನ್ನಡಪರ ಸಂಘಟನೆಗಳು ತಿರುವಳ್ಳವರ್ ಪ್ರತಿಮೆ ಅನಾವರಣ ವಿರೋಧಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಲಯ ಅಸಮ್ಮತಿ ಸೂಚಿಸುವುದರೊಂದಿಗೆ ಸಂಘಟನೆಗಳು ಹಿನ್ನಡೆ ಅನುಭವಿಸಿದೆ. ಚೆನ್ನೈ ನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣವಾಗುವುದು ನಿಮಗೆ ಇಷ್ಟವಿಲ್ಲವೇ ? ಜಾತಿ ಮತ್ತು ಭಾಷೆಯ ಹೆಸರಿನಲ್ಲಿ ಎರಡೂ ರಾಜ್ಯಗಳ ಜನರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಹೊಗೇನಕಲ್ ಮುಂತಾದ ವಿವಾದಗಳು ಪರಿಹಾರಗೊಂಡ ನಂತರವೇ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ರಾಜ್ಯದಲ್ಲಿ ಅವಕಾಶ ನೀಡಬೇಕೆಂದು ಮಾಜಿ ಶಾಸಕ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾವೇದಿಕೆಯ ಪ್ರವೀಣ್ ಶೆಟ್ಟಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಇಂದೇ ವಿಚಾರಣೆಗೆ ತೆಗೆದು ಕೊಳ್ಳಬೇಕು ಎನ್ನುವ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯನ್ಯಾಯಮೂರ್ತಿಗಳಾದ ಪಿ.ಡಿ.ದಿನಕರನ್, ಈ ವಿಚಾರದಲ್ಲಿ ತುರ್ತು ವಿಚಾರಣೆ ಅನಗತ್ಯ. ಭಾಷಾ ಆಧಾರಿತ ಹೋರಾಟ ನಡೆಸಿ ದೇಶವನ್ನು ವಿಭಜಿಸುವ ಕೆಲಸ ಮಾಡಬೇಡಿ. ಹೋರಾಟ ಯಾವಾಗಲು ನ್ಯಾಯ ಸಮ್ಮತವಾಗಿರಬೇಕು ಎಂದು ಹೇಳಿ ಅರ್ಜಿ ವಿಚಾರಣೆ ತಿರಸ್ಕರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X