ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದ ವಿರುದ್ದ ಹರಿಹಾಯ್ದ ಕರವೇ

By Staff
|
Google Oneindia Kannada News

TA Narayanagowda
ಬೆಂಗಳೂರು, ಆ. 4 : ಪ್ರತಿಮೆ ಅನಾವರಣಕ್ಕೆ ನಮ್ಮ ವಿರೋಧವಿಲ್ಲ. ತಿರುವಳ್ಳುವರ್ ಮೇಲೆ ನಮಗೂ ಗೌರವವಿದೆ. ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸರಕಾರ ಈ ಕೆಲಸಕ್ಕೆ ಮುಂದಾಗಿರುವುದು ತಪ್ಪು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಮನಸು ಮಾಡಿದರೆ ಒಂದೇ ದಿನದಲ್ಲಿ ಕರುಣಾನಿಧಿಯವರಿಗೆ ಒತ್ತಡ ತಂದು ಕನ್ನಡಕ್ಕೆ ನೀಡಿದ ಶಾಸ್ತ್ರೀಯ ಸ್ಥಾನಮಾನದ ವಿರುದ್ದ ಮದ್ರಾಸ್ ಹೈಕೋರ್ಟ್ ನಲ್ಲಿರುವ ರಿಟ್ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎಂದರು.

ಕೋಲಾರದ ಕೆಜಿಎಫ್ ನಲ್ಲಿ ಪೆರಿಯಾರ್, ಅಣ್ಣಾದೊರೈ, ಎಂಜಿಆರ್ ಅವರ ಪ್ರತಿಮೆಗಳಿವೆ. ಆದರೆ ಆ ಸಂದರ್ಭವೇ ಬೇರೆ, ಈ ಸಂದರ್ಭವೇ ಬೇರೆ. ಈ ಸಮಯದಲ್ಲಿ ತಮಿಳುನಾಡು ಸರಕಾರಕ್ಕೆ ಒತ್ತಡ ತಂದು ನಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು. ಅದು ಬಿಟ್ಟು ನಮ್ಮ ಯಾವುದೇ ಬೇಡಿಕೆಗಳಿಗೆ ಸರಕಾರ ಮಣೆಹಾಕದೆ ಪ್ರತಿಮೆ ಅನಾವರಣಕ್ಕೆ ಮುಂದಾಗಿರುವುದು ಕನ್ನಡಿಗರ ದುರ್ಗತಿ ಎಂದು ವಿಷಾಧ ವ್ಯಕ್ತಪಡಿಸಿದರು.

ನಾವು ಪ್ರತಿಮೆ ಅನಾವರಣ ಯಾತಕ್ಕಾಗಿ ವಿರೋಧಿಸುತ್ತಿದ್ದೇವೆ ಎಂದು ನಮ್ಮವರಿಗೇ ವಿವರಿಸಬೇಕಾಗಿ ಬಂದಿದ್ದು ದೊಡ್ಡ ದುರಂತ. ನಾವು ಆಗಸ್ಟ್ 9ರಂದು ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸರಕಾರ ಎನೇ ಬಲ ಪ್ರಯೋಗಿಸಿದರೂ ನಾವು ಇದಕ್ಕೆ ತಡೆ ಒಡ್ಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X